ಸಿಡಿ ಭಯದಿಂದ ಆತ್ಮಹತ್ಯೆ ಮಾಡಿಕೊಂಡ್ರಾ “ನೇಗಿನಹಾಳದ ಶ್ರೀಗಳು”…
1 min readಬೆಳಗಾವಿ: ಮಾನಸಿಕ ನೊಂದ ಶ್ರೀ ಬಸವ ಸಿದ್ಧಲಿಂಗ ಸ್ವಾಮೀಜಿಗಳು ಮಠದಲ್ಲೇ ನೇಣು ಹಾಕಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ನೇಗಿನಹಾಳದಲ್ಲಿ ಬೆಳಕಿಗೆ ಬಂದಿದೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಿಡಿ ಹೊರ ಬರುತ್ತೆ ಎಂದು ಹೆದರಿಕೊಂಡು ಬೈಲಹೊಂಗಲ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.
ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವ ಸಿದ್ಧಲಿಂಗ ಸ್ವಾಮೀಜಿ ಸಾವಿಗೆ ಕೊರಳೊಡ್ಡಿದ್ದಾರೆ. ಇಬ್ಬರು ಮಹಿಳೆಯರ ವೈರಲ್ ಆಡಿಯೋದಲ್ಲಿ ಸ್ವಾಮೀಜಿ ಹೆಸರು ಕೇಳಿ ಬಂದಿತ್ತು. ಮುರುಘಾಶ್ರೀ ಲೈಂಗಿಕ ಕಿರುಕುಳ ಕೇಸ್ ಬೆನ್ನಲ್ಲೇ ಆಡಿಯೋ ವೈರಲ್ ಆಗಿತ್ತು. ಈ ಆಡಿಯೋ ಬಯಲಾದ ನಂತರ ಸ್ವಾಮೀಜಿಗಳು ಆತಂಕಗೊಂಡಿದ್ರಾ ಎಂಬ ಪ್ರಶ್ನೆ ಕಾಡುತ್ತಿದೆ. ಮಡಿವಾಳೇಶ್ವರ ಮಠಕ್ಕೆ ಬೈಲಹೊಂಗಲ ಠಾಣೆ ಪೊಲೀಸರ ಭೇಟಿ ಕೊಟ್ಟಿದ್ದಾರೆ.
ಪ್ರಮುಖ ಅಂಶಗಳು
ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ.
ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ.
ಆಡಿಯೋ ಸಂಭಾಷಣೆ ಬಗ್ಗೆ ಕೂಡ ಡೆತ್ ನೋಟ್ ನಲ್ಲಿ ಉಲ್ಲೇಖ.
ಮನಗುಂಡಿ ಗ್ರಾಮದ ಸತ್ಯಕ್ಕ, ಗಂಗಾವತಿಯ ರುದ್ರಮ್ಮಾ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ.
ಡೆತ್ ನೋಟ್ ನಲ್ಲಿ ಆಡಿಯೋದಲ್ಲಿ ಸಂಭಾಷಣೆ ನಡೆಸಿದವರ ವಿರುದ್ಧ ಕ್ರಮಕ್ಕೆ ಸ್ವಾಮೀಜಿ ಒತ್ತಾಯ.
ಲಿಂಗಾಯತ ಸಮಾಜ ಬೀದಿಗಿಳಿದು ಹೋರಾಟ ಮಾಡುವ ಮುನ್ನ ಕ್ರಮ ಕೈಗೊಳ್ಳಿ.
ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಲಿಂಗಾಯತ ಮಠಾಧೀಶರನ್ನ ಗುರಿಯಾಗಿಸಿಕೊಂಡು.
ಇಲ್ಲದ ಸಲ್ಲದ ಆರೋಪ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ.
ಮಠಾಧೀಶರಿಗೆ ಧಕ್ಕೆಯಾಗುವ ರೀತಿಯಲ್ಲಿ, ಲಿಂಗಾಯತ ಧರ್ಮದವರಿಗೆ ಮುಜುಗರ ತರುತ್ತಿದ್ದಾರೆ.
ಹೀಗೆ ಎಲ್ಲವನ್ನೂ ಬರೆದು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಸ್ವಾಮೀಜಿ.