ಯುವತಿಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿ ಬಂಧನ
1 min readಕೋಲಾರ: ಶಿವರಾತ್ರಿ ಮರುದಿನವೇ 19ವರ್ಷದ ಯುವತಿಯೊಂದಿಗೆ ಪರಾರಿಯಾಗಿದ್ದ ಕೋಲಾರ ತಾಲೂಕಿನ ಹೊಳಲಿ ಪೀಠಾಧಿಪತಿಯಾಗಿದ್ದ ಸ್ವಾಮೀಜಿಯನ್ನ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದ ದತ್ತಾತ್ರೇಯ ಅವಧೂತ ಸ್ವಾಮೀಜಿ ಅಲಿಯಾಸ್ ರಾಘವೇಂದ್ರ, ಯುವತಿಯನ್ನ ಮತಿಭ್ರಮಣೆಗೊಳಿಸಿ ಪರಾರಿಯಾಗಿದ್ದನೆಂದು ಯುವತಿಯ ಪೋಷಕರು ದೂರು ದಾಖಲಿಸಿದ್ದರು. ಇದೀಗ ಸ್ವಾಮೀಜಿಯನ್ನ ಬಂಧನ ಮಾಡಿರುವ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಯುವತಿಯನ್ನ ಪೋಷಕರ ಸುಫರ್ದಿಗೆ ನೀಡಲಾಗಿದೆ.