ಸತ್ಯ ದರ್ಶನಕ್ಕೆ ಅಖಾಡಾ ಸಿದ್ಧ: ಯಾರೂ ಅಸತ್ಯರು ಗೊತ್ತಾ..?

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ ತಮ್ಮನ್ನ ನೇಮಕ ಮಾಡುವ ಸಮಯದಲ್ಲಿ ಯಾರೂ ಯಾರೂ ತಮಗೆ ಉತ್ತರಾಧಿಕಾರಿಯಾಗು ಎಂದು ಒತ್ತಾಯ ಮಾಡಿದ್ರು ಎಂಬುದನ್ನ ಬಹಿರಂಗ ಮಾಡುವಂತೆ ಸತ್ಯ ದರ್ಶನ ಮಾಡಲು ಮುಂದಾಗಿರುವ ಶ್ರೀ ದಿಂಗಾಲೇಶ್ವರ ಶ್ರೀಗಳಿಗೆ ಕೆಲವರು ಅಡ್ಡಿಯಾಗುತ್ತಿದ್ದಾರೆ.
ಮೂರುಸಾವಿರ ಮಠದ ಉತ್ತರಾಧಿಕಾರಿ ನಾನೇ ಎಂದು ಹೇಳಿದ ಶ್ರೀ ದಿಂಗಾಲೇಶ್ವರ ಶ್ರೀಗಳ ಬೆನ್ನಿಗೆ ಮಾಜಿ ಸಂಸದ ವಿಜಯ ಸಂಕೇಶ್ವರ, ಹಾಲಿ ಶ್ರೀಗಳು ಮಠದಲ್ಲಿ ದಿಂಗಾಲೇಶ್ವರ ಶ್ರೀಗಳನ್ನ ಮಾಲೆ ಹಾಕಿ ಸ್ವಾಗತಿಸಿ, ವೀರಶೈವರಿಗೆ ಉಪಕಾರ ಮಾಡಬೇಕೆಂದು ಕೋರಿದ್ದರು. ಆದರೆ, ಶ್ರೀ ಮೂಜಗು ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡದೇ ಹೊರಗೆ ಬರುತ್ತಿಲ್ಲ.
ಶ್ರೀ ಮೂಜಗು ಅವರನ್ನ ಹೊರಗೆ ಬರದಂತೆ ತಡೆಯಲಾಗುತ್ತಿದೆ ಎಂಬ ಭಾವನೆಯೂ ಅನೇಕರಲ್ಲಿ ಮೂಡಿದೆ. ಅವರನ್ನ ಬಂಧನದಲ್ಲಿ ಇಟ್ಟು ಆಟ ಆಡಲಾಗುತ್ತಿದೆ.