ಪ್ರಧಾನಿ ಮೋದಿ ಸಂಪುಟದ ಸಚಿವ ಇನ್ನಿಲ್ಲ: ಸಚಿವ ಜಗದೀಶ ಶೆಟ್ಟರ ಸಂಬಂಧಿ ಸಚಿವ ಸುರೇಶ ಅಂಗಡಿ ನಿಧನ
ನವದೆಹಲಿ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ(65) ನಿಧನರಾಗಿದ್ದಾರೆ. ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ವೈದ್ಯಕೀಯ ಚಿಕಿತ್ಸೆಗೆ ಸ್ಪಂಧಿಸದೆ ಕೊನೆಯುಸಿರು ಎಳೆದಿದ್ದಾರೆ.
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಅಂಗಡಿ ಈ ಬಾರಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದರು, ಅಲ್ಲದೆ ಜನರ ವಿಶ್ವಾಸ ಪ್ರಶಂಸೆ ಗಳಿಸಿದ್ದರು. ಎಂಪಿಯಾಗಿದ್ದ ಸುರೇಶ್ ಅಂಗಡಿ ಪತ್ನಿ ಮಕ್ಕಳನ್ನು ಅಗಲಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸುರೇಶ್ ಅಂಗಡಿ ದೂರವಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದರು.
ತಮ್ಮ ಓರ್ವ ಮಗಳನ್ನ ರಾಜ್ಯದ ಸಚಿವ ಜಗದೀಶ ಶೆಟ್ಟರ ಅವರ ಮಗನಿಗೆ ಕೊಟ್ಟು, ಅವರಿಬ್ಬರು ಬೀಗರಾಗಿದ್ದನ್ನ ಇಲ್ಲಿ ಸ್ಮರಿಸಬಹುದು.
ಸುರೇಶ್ ಅಂಗಡಿ ಬೆಳೆದು ಬಂದ ಹಾದಿ.
ಸುರೇಶ್ ಅಂಗಡಿಯವರು ಬೆಳಗಾವಿ ಜಿಲ್ಲೆಯ ಕೊಪ್ಪದಲ್ಲಿ 1955 ರ ಜನವರಿ 1 ರಂದು ಜನನ ಹೊಂದಿದ್ದರು.
ತಾಯಿ ಸೋಮವ್ವ ಅಂಗಡಿ, ತಂದೆ ಚನ್ನಬಸಪ್ಪ ಅಂಗಡಿ.
ಪತ್ನಿ : ಮಂಗಳಾ ಅಂಗಡಿ
ಮಕ್ಕಳು : ಇಬ್ಬರು ಹೆಣ್ಣು ಮಕ್ಕಳು
ಸುರೇಶ್ ಅಂಗಡಿ ನಾಲ್ಕನೇ ಬಾರಿ ಬೆಳಗಾವಿಯಿಂದ ಸಂಸತ್ ಪ್ರವೇಶಿಸಿದ್ದರು.
1996 ರಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿಯ ಉಪಾಧ್ಯಕ್ಷರಾಗಿದ್ದರು.
ಆರ್.ಎಲ್ ಲಾ ಕಾಲೇಜ್ ಬೆಳಗಾವಿಯಲ್ಲಿ ಕಾನೂನು ಪದವಿ
1999ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷ
2001ರಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ
2004ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಗೆಲುವು
2009ರಲ್ಲಿ ಎರಡನೇ ಬಾರಿ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆ
2014ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆ
2019ರಲ್ಲಿ 4ನೇ ಬಾರಿಗೆ ಸಂಸತ್ ಪ್ರವೇಶ
30 ಮೇ. 2019ರಲ್ಲಿ ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕಾರ
ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವರಾಗಿ ಪ್ರಮಾಣ
19 ಜುಲೈ 2016 ರಿಂದ 25 ಮೇ 2019ರ ವರೆಗೆ ಪಾರ್ಲಿಮೆಂಟ್ ಹೌಸ್ ಕಮಿಟಿ ಅಧ್ಯಕ್ಷರಾಗಿದ್ದರು.