ಸೂಪರ್‌ಸ್ಟಾರ್ ರಜನಿಕಾಂತ್ ಪ್ರಾಣಾಪಾಯದಿಂದ ಪಾರು

ಚೆನ್ನೈ: ಮೈಸೂರು ಮೂಲದ ವಿಮಾನ ಟೆಕ್ ಆಫ್ ಆಗುವ ಮುನ್ನ ತಾಂತ್ರಿಕ ಸಮಸ್ಯೆಯನ್ನು ಪತ್ತೆ ಹಚ್ಚಿದ ಕಾರಣದಿಂದಾಗಿ ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿದಂತೆ 47 ಪ್ರಯಾಣಿಕರು ದೊಡ್ಡ ಅನಾಹುತದಿಂದ ಪಾರಾದ ಘಟನೆ ಚೆನ್ನೈನಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಚೆನ್ನೈ ವಿಮಾನ ನಿಲ್ದಾಣದಿಂದ ಮೈಸೂರು ಮೂಲದ ಖಾಸಗಿ ಜೆಟ್ ವಿಮಾನ ಹೊರಡಬೇಕಾಗಿತ್ತು. ಟೇಕಾಫ್ ತಯಾರಿಗೂ ಮುನ್ನವೇ ವಿಮಾನದಲ್ಲಿನ ತಾಂತ್ರಿಕ ದೋಷವನ್ನು ಇಂಜಿನಿಯರ್ಗಳು ಪತ್ತೆ ಹಚ್ಚಿ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿ ಮುಂದೆ ಆಗಬಹುದಾಗಿದ್ದ ಅನಾಹುತದಿಂದ ಪಾರು ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿದ 2ಗಂಟೆಗಳ ನಂತರ ವಿಮಾನ ಹೊರಟಿತು. ಅಲ್ಲಿಯವರೆಗೂ ರಜಿನಿಕಾಂತ್ ಅವರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆದರು. ಅನಿರೀಕ್ಷಿತ ವಿಳಂಬದಿಂದ ಕೆಲವರು ತೊಂದರೆಗೆ ಒಳಗಾದರೆ, ಸೂಪರ್ ಸ್ಟಾರ್ ಇದೇ ಸಮಯದಲ್ಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳೊಂದಿಗೆ ಸಮಯ ಕಳೆಯುವುದರ ಜೊತೆಗೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಅಭಿಮಾನಿಗಳ ಪ್ರೀತಿಗೆ ಪಾತ್ರರಾದರು.