ಹುಬ್ಬಳ್ಳಿ: ಸುಳ್ಳದಲ್ಲಿ “ಅಂದರ್-ಬಾಹರ್” ರೇಡ್- 2ಬೈಕ್ ಸಮೇತ ಐವರು ವಶಕ್ಕೆ…
ಹುಬ್ಬಳ್ಳಿ: ಪೊಲೀಸರ ಕಣ್ಣು ತಪ್ಪಿಸಿ ಅಂದರ್-ಬಾಹರ್ ಆಡುತ್ತಿದ್ದರ ಮೇಲೆ ದಾಳಿ ಮಾಡಿರುವ ಪೊಲೀಸರು ಎರಡು ಬೈಕ್ ಸಮೇತ ಐವರನ್ನ ವಶಕ್ಕೆ ಪಡೆದುಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಬಳಿ ನಡೆದಿದೆ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಟೀಂ, ತಮ್ಮ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುಳ್ಳದಲ್ಲಿ ನಡೆದ ದಾಳಿಯಲ್ಲಿ ಎರಡು ಬೈಕ್, ಹದಿನೆಂಟು ಸಾವಿರಕ್ಕೂ ಹೆಚ್ಚು ಹಣ ಹಾಗೂ ಐವರನ್ನ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ. ಗ್ರಾಮೀಣ ಠಾಣೆಯ ಪಿಎಸ್ಐ ಸೇರಿದಂತೆ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
