ರಾಜ್ಯ ಸರಕಾರದಿಂದ “ಸುಜಯ ಬಸವರಾಜ ಕೊರವರ” ಸತ್ಕಾರ…!!!

ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದ ಸುಜಯ
ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಟಗಾರನಾಗಿರೋ ಸುಜಯ
ಬೆಂಗಳೂರು: 13ರಿಂದ 17ರ ವಯಸ್ಸಿನ ರಾಜ್ಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ಮಾಡಿರುವ ಸುಜಯ ಬಸವರಾಜ ಕೊರವರ ಅವರನ್ನ ರಾಜ್ಯ ಸರಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಲ್ಪಸಂಖ್ಯಾತ ನಿರ್ದೇಶನಾಲಯದಿಂದ ರಾಜಧಾನಿಯಲ್ಲಿಂದು ಸತ್ಕರಿಸಲಾಯಿತು.
ಸಚಿವ ಬಿ.ಝಡ್. ಜಮೀರ ಅಹ್ಮದ ಅವರು ಸುಜಯನಿಗೆ ಸತ್ಕರಿಸಿ, ಮುಂದಿನ ಯಶಸ್ಸಿಗೆ ಶುಭ ಕೋರಿದರು. ಈ ಸಮಯದಲ್ಲಿ ಕಾರ್ಯದರ್ಶಿ ಮನೋಜ್ ಜೈನ್, ಡಿಓ ಗೋಪಾಲ ಲಮಾಣಿ, ನಿರ್ದೇಶಕ ಜೆಲಾನಿ ಮೊಕಾಸಿ, ಪ್ರಿನ್ಸಿಪಾಲ ಸಂಗಮೇಶ ಎಂ.ಎಚ್ ಹಾಗೂ ಧಾರವಾಡ ಪೊಲೀಸ್ ಹೆಡ್‌ಕ್ವಾಟರ್ಸ್‌ನ ಸರಕಾರಿ ಮೌಲಾನಾ ಆಜಾದ್ ಮಾಡೆಲ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರು ಮತ್ತೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುಜಯ ಕೊರವರಗೆ ಇದೇ ಸಮಯದಲ್ಲಿ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಶುಭಾಶಯ ತಿಳಿಸಿದರು.