ಶಿರಸಿ: ಆನ್ ಲೈನ್ ಗೇಮ್ ನಲ್ಲಿ ಹಣ ಕಳೆದುಕೊಂಡ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಳವೆಯಲ್ಲಿ ನಡೆದಿದೆ. ಬಾಳೆತೋಟದ ವಿಜೇತ ಶಾಂತಾರಾಮ ಹೆಗಡೆ(37) ಮೃತ ವ್ಯಕ್ತಿ. ಆನ್ ಲೈನ್ ಗೇಮ್ ನಲ್ಲಿ 65 ಲಕ್ಷ ಕಳೆದುಕೊಂಡಿದ್ದ ಎನ್ನಲಾಗಿದೆ.
ಈತ ಆನ್ ಲೈನ್ ಗೇಮ್ ಚಟಕ್ಕೆ ಬಲಿಯಾಗಿ ಸುಮಾರು 65 ಲಕ್ಷ ರೂ. ಪಾವತಿಸಬೇಕಾಗಿತ್ತು. ಆದರೆ ಅಷ್ಟೊಂದು ಹಣ ಅವನ ಬಳಿ ಇರಲಿಲ್ಲ. ಈ ಕಾರಣಕ್ಕೆ ಬೆಂಗಳೂರು ತೊರೆದು ಶಿರಸಿಯ ತನ್ನ ಊರಾದ ಬಾಳೆತೋಟಕ್ಕೆ ಬಂದು ಉಳಿದು ಕೊಂಡಿದ್ದನು. ಶುಕ್ರವಾರ ರಾತ್ರಿ ಬೆಂಗಳೂರಿಗೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ಬೆಂಗಳೂರಿಗೆ ತೆರಳದೇ, ಪುನಃ ವಾಪಸ್ಸು ಮನೆಗೆ ಬಾರದೇ ಕುಳವೆ ಅರಣ್ಯ ಪ್ರದೇಶದಲ್ಲಿ ನೇಣಿಗೆ ಶರಣಾಗಿದ್ದಾನೆ.
ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಆನ್ ಗೇಮ್ ಚಟಕ್ಕೆ ಬಲಿಯಾಗಿ ಸುಮಾರು 65 ಲಕ್ಷ ರೂ. ಪಾವತಿಸಬೇಕಾಗಿತ್ತು. ಅಷ್ಟೊಂದು ಹಣ ಹೊಂದಾಣಿಗೆಯಾಗದ ಕಾರಣ ಊರಿಗೆ ವಾಪಸ್ಸಾಗಿದ್ದನು ಎನ್ನಲಾಗಿದೆ. ಹಣ ತೀರಿಸಲು ಒತ್ತಡ ಬಂದ ಕಾರಣ ಬೇರೆ ಮಾರ್ಗವಿಲ್ಲದೇ, ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಕುಟುಂಬಸ್ಥರು ಬೆಳಿಗ್ಗೆ ಗ್ರಾಮೀಣ ಠಾಣೆಗೆ ನಾಪತ್ತೆ ಪ್ರಕರಣ ನೀಡಲು ಆಗಮಿಸಿದಾಗ ಪೊಲೀಸರು ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದಾಗ ಕುಳವೆ ಅರಣ್ಯ ಪ್ರದೇಶದಲ್ಲಿ ಮೊಬೈಲ್ ಇರುವಿಕೆ ಪತ್ತೆಯಾದಾಗ ಅಲ್ಲಿಗೆ ತೆರಳಿದಾಗ ಮರಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡು ಬಂದಿದೆ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್‌ಪೆಕ್ಟರ್ ಸೀತಾರಾಮ ಪಿ ಅವರು ತನಿಖೆ ಕೈಗೊಂಡಿದ್ದಾರೆ.