ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ- ರಾಜಾಹುಲಿ ಆತ್ಮಹತ್ಯೆಗೆ ಶರಣು…!

ಚಾಮರಾಜನಗರ: ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದ ಮನಸ್ಸಿಗೆ ಹಚ್ಚಿಕೊಂಡ ಅವರ ಅಭಿಮಾನಿಯೋರ್ವ ನೇಣಿಗೆ ಶರಣಾದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.

ರವಿ (35) ನೇಣಿಗೆ ಶರಣಾದ ಬಿ.ಎಸ್.ವೈ ಅಭಿಮಾನಿಯಾಗಿದ್ದು, ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ. ರವಿ ಬಿ.ಎಸ್.ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದನು.
ನಿನ್ನೆ ಬಿ.ಎಸ್. ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ ರವಿ. ನಿನ್ನೆ ಹೋಟೆಲ್ ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ರವಿಯನ್ನ ಗ್ರಾಮದಲ್ಲಿ ಎಲ್ಲರೂ ರಾಜಾಹುಲಿ ಎಂದೇ ಕರೆಯುತ್ತಿದ್ದರು. ಯಡಿಯೂರಪ್ಪನವರನ್ನ ತೀವ್ರವಾಗಿ ಅಭಿಮಾನಿಸುತ್ತಿದ್ದ ರವಿ, ಇನ್ನಿಲ್ಲವಾಗಿರುವುದು ಗ್ರಾಮದಲ್ಲಿ ನೀರವಮೌನ ಮೂಡಿಸಿದೆ.