“ಬಡ್ಡಿಗೆ ಬಿತ್ತು ಹೆಣ”- ಧಾರವಾಡದ ನತದೃಷ್ಟ- ವೀಡಿಯೋ ಮಾಡಿ ವಿಷಪ್ರಾಶನ…
1 min readಧಾರವಾಡ: ಬಡ್ಡಿ ಹಣಕ್ಕಾಗಿ ಮನೆಯನ್ನ ಬರೆದುಕೊಟ್ಟಿದ್ದನೆಂದು, ಅದರಿಂದ ಮತ್ತಷ್ಟು ತೊಂದರೆ ಆಗುತ್ತಿದೆ ಎಂದು ನೊಂದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಿಂಗರಾಜು ಎಂಬುವವರಿಗೆ ಆನಂದ ಪಾಸ್ತೆ ಎಂಬುವವರೇ ಮನೆಯನ್ನ ಬೇರೆದವರ ಹೆಸರಿನಲ್ಲಿ ಬರೆಸಿಕೊಂಡು ಅನ್ಯಾಯ ಮಾಡುತ್ತಿದ್ದಾರೆ. ಹಾಗಾಗಿಯೆ ವಿಷ ಸೇವಿಸಿ ಸಾಯುತ್ತಿರುವುದಾಗಿ ಹೇಳಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
ವೈರಲ್ ವೀಡಿಯೋ..
ಈ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಿದ್ದರೂ ಇದಕ್ಕೊಂದು ತಾರ್ಕಿಕ ಅಂತ್ಯ ಹಾಡದೇ ಇರುವುದು ಸೋಜಿಗ ತಂದಿದೆ.
ಈ ಬಗ್ಗೆ ಬಸವರಾಜ ಕೊರವರ ಹೇಳಿಕೆ…
ಓರ್ವ ಬಡವನ ಬಗ್ಗೆ ಇಷ್ಟೊಂದು ಅನ್ಯಾಯವಾದಾಗಲೂ ಕಾನೂನು ಕ್ರಮ ಜರುಗಿಸದೇ ಇರುವುದು ಅನ್ಯಾಯ. ನಿಂಗರಾಜನ ಕುಟುಂಬಕ್ಕೆ ನಾನು ಬೆನ್ನುಲುಬಾಗಿ ನಿಂತು ಆತನ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುತ್ತೇನೆ. ಬಡ್ಡಿ ವ್ಯಾಪಾರದಲ್ಲಿ ತೊಡಗಿ ಕುಟುಂಬಗಳನ್ನ ನಾಶ ಮಾಡುತ್ತಿರುವವರನ್ನ ಜೈಲಿಗೆ ಅಟ್ಟಬೇಕೆಂದು ಆಗ್ರಹಿಸಿದ್ದಾರೆ.