ಸಾಯಿನಗರದ ಬಳಿಯ ರೇಲ್ವೆ ಹಳಿಯಲ್ಲಿ ಶವವಾದ ವ್ಯಕ್ತಿ…!

ಹುಬ್ಬಳ್ಳಿ: ಉಣಕಲ್ ಸಾಯಿನಗರದ ಬಳಿಯ ರೇಲ್ವೆಯ ಹಳಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಶವವೊಂದು ಸಿಕ್ಕಿದ್ದು, ಯಾವ ಕಾರಣಕ್ಕೆ ರೇಲ್ವೆ ಹಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬುದು ತಿಳಿದು ಬಂದಿಲ್ಲ.

ಸುಮಾರು 55 ರಿಂದ 60 ವರ್ಷದ ಪುರುಷನ ಶವ ದೊರಕಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ರೇಲ್ವೆ ಠಾಣೆಯ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕರೇ, ಹುಬ್ಬಳ್ಳಿ ರೇಲ್ವೆ ಠಾಣೆಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.