ಕೊಲ್ಲಾಪುರ ಲಾಡ್ಜನಲ್ಲಿ ರವಿ ಹೋತಪೇಟೆ ಆತ್ಮಹತ್ಯೆ…!

ಹುಬ್ಬಳ್ಳಿ: ನಗರದ ವೀರಾಪೂರ ಓಣಿಯ ನಿವಾಸಿಯಾಗಿರುವ ವ್ಯಕ್ತಿಯೋರ್ವರು ವಸ್ತುಗಳನ್ನ ಖರೀದಿ ಮಾಡಲು ಹೋಗಿ ಕೊಲ್ಲಾಪುರದ ಲಾಡ್ಜವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಅಯ್ಯಪ್ಪ ಮಾಲಾ ಧಾರಿಗಳಿಗೆ ಗುರುವಾಗಿದ್ದ ರವಿ ಹೋತಪೇಟೆ ಗೊಂಬೆಗಳಿಗೆ ಆಭರಣಗಳನ್ನ ಪೂರೈಕೆ ಮಾಡುತ್ತಿದ್ದರು. ಅದೇ ಕಾರಣಕ್ಕೆ ಆಭರಣಗಳನ್ನ ತರುವುದಾಗಿ ಕೊಲ್ಲಾಪುರಕ್ಕೆ ಹೋಗಿದ್ದರು. ಇದೇ ಸಮಯದಲ್ಲಿ ತಂಗಿದ್ದ ಲಾಡ್ಜನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ.

ಹುಬ್ಬಳ್ಳಿಯ ಬಹುತೇಕ ಭಾಗದ ಅಯ್ಯಪ್ಪ ಮಾಲಾ ಧಾರಿಗಳ ಪೂಜೆಗಳಲ್ಲಿ ಭಾಗವಹಿಸುತ್ತಿದ್ದ ರವಿ ಹೋತಪೇಟೆ, ಯಾವ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆನ್ನುವುದು ಗೊತ್ತಾಗಿಲ್ಲ.
ಕೊಲ್ಲಾಪುರ ಠಾಣೆಯ ಪೊಲೀಸರು ಮಾಹಿತಿಯನ್ನ ಕುಟುಂಬದವರಿಗೆ ರವಾನೆ ಮಾಡಿದ್ದು, ರವಿ ಹೋತಪೇಟೆಯ ಸಂಬಂಧಿಗಳು ಕೊಲ್ಲಾಪುರಕ್ಕೆ ತೆರಳಿದ್ದಾರೆ.