ಹುಬ್ಬಳ್ಳಿಯಲ್ಲಿ ಎರಡು ಮಕ್ಕಳ ತಾಯಿ ನೇಣಿಗೆ ಶರಣು…!
1 min readಹುಬ್ಬಳ್ಳಿ: ಆಕೆ ಎಲ್ಲವನ್ನೂ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಳು. ಗಂಡನ ನೋವಿನಲ್ಲೂ ಕುಗ್ಗದೇ ಜೀವನ ನಡೆಸುವ ಛಾತಿ ಹೊಂದಿದ್ದಳು. ಅಂತವಳು ಹೇಗೆ ನೇಣಿಗೆ ಶರಣಾಗಿ ಪ್ರಾಣವನ್ನ ಬಿಡ್ತಾಳೆ ಎನ್ನುವ ಸ್ಥಿತಿಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಚೋಳನವರ ಓಣಿಯ ನಿವಾಸಿ ಬಲರಾಮ ಚಂದಾವರಿ ಎಂಬುವವನ್ನ ಪೂಜಾ ಎಂಬಾಕೆ ಮದುವೆಯಾಗಿದ್ದಳು. ಕೆಎಸ್ಸಾರ್ಟಿಸಿ ಚಾಲಕ ಬಲರಾಮನ ಜೊತೆಗೆ ಅನ್ಯೋನ್ಯವಾಗಿಯೇ ಪ್ರತಿಕ್ಷಣವನ್ನೂ ಕಳೆಯುತ್ತ ಬಂದಿದ್ದಳು. ಅಷ್ಟೇ ಅಲ್ಲ, ಇಬ್ಬರ ಮಕ್ಕಳ ತಾಯಿಯಾಗಿ ಅವರಿಬ್ಬರು ಜೋಪಾನ ಮಾಡಿಕೊಂಡು ಹೊರಟಿದ್ದಳು. ಅಂಥವಳು ನೇಣಿಗೆ ಶರಣಾಗ್ತಾಳಾ ಎಂಬ ಸಂಶಯ ಪೂಜಾಳ ಮನೆಯವರಿಗೆ ಮೂಡಿದೆ.
ಅದೇ ಕಾರಣಕ್ಕೆ ಪೂಜಾಳ ಶವವಿರುವ ಕಿಮ್ಸ್ ನ ಶವಾಗಾರದ ಮುಂದೆ, ಕಣ್ಣೀರಿಡುತ್ತ ಇದು ಆತ್ಮಹತ್ಯೆಯಲ್ಲ, ಅನುಮಾನಸ್ಪದ ಸಾವು. ಇದನ್ನ ಸರಿಯಾಗಿ ತನಿಖೆ ಮಾಡಿ, ತಪ್ಪಿತಸ್ಥರನ್ನ ಬಂಧನ ಮಾಡಿ ಎಂದು ಗೋಗೆರೆಯುತ್ತಿದ್ದಾರೆ.
ಪೂಜಾ, ಮನೆಯಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದು, ನಿನ್ನೆಯಿಂದಲೇ ಆಕೆಯ ಶವವನ್ನ ಕಿಮ್ಸನ ಶವಾಗಾರದಲ್ಲಿಡಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿರುವ ಘಂಟಿಕೇರಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.