ಇದ್ದ ಹೆಂಡತಿಯನ್ನ ಬಿಟ್ಟು “ಎರಡು ಮಕ್ಕಳ ತಾಯಿ” ಜೊತೆ ಪೊಲೀಸ್ ಮಹಾಶಯನ ಸಂಬಂಧ- ಆತ್ಮಹತ್ಯೆ ಹಿಂದಿನ ಕಟು ಸತ್ಯ…!!!
1 min readಹುಬ್ಬಳ್ಳಿ: ಇದು ಪೊಲೀಸ್‌ರೊಬ್ಬರ ಆತ್ಮಹತ್ಯೆಯ ಪ್ರಕರಣವಲ್ಲ. ಕೇವಲ ಕಾನೂನಿನ ಪ್ರಕಾರ ಅಷ್ಟೇ. ಆದರೆ, ಬಡ ಕುಟುಂಬದ ಯುವಕನೋರ್ವ ಹೇಗೇಲ್ಲಾ ಬದುಕು ಹಾಳು ಮಾಡಿಕೊಳ್ಳಬಹುದು ಎನ್ನುವುದನ್ನ ನವನಗರದ ಮನೆಯೊಂದರಲ್ಲಿ ನಡೆದ ಜೋಡಿ ಆತ್ಮಹತ್ಯೆಗಳು ಸಾಕ್ಷ್ಯ ನುಡಿಯುತ್ತಿವೆ.
ಲಕ್ಷ್ಮೇಶ್ವರದ ಬಳಿಯ ಶಿಗ್ಲಿ ಎಂಬ ಗ್ರಾಮದಿಂದ ಬಂದ ಮಹೇಶ ಹೆಸರೂರ, ಪೊಲೀಸ್ ಇಲಾಖೆಯಲ್ಲಿ ತನ್ನದೇ ಛಾಪು ಮೂಡಿಸುವ ಜೊತೆಗೆ ಬಡತನವನ್ನ ಮೆಟ್ಟಿ ನಿಲ್ಲಬೇಕೆಂದು ಕನಸು ಕಂಡಿದ್ದ.
ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಆತ ದಾರಿ ತಪ್ಪಿದ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣವಾಗಿದ್ದು “ಪಡ್ಡು ಅಂಗಡಿ”. ದಿನವೂ ಡ್ಯೂಟಿ ಮಾಡುತ್ತಿದ್ದಾಗ ಪಡ್ಡಂಗಡಿಯ ಈಕೆ ಪರಿಚಯವಾಗ್ತಾಳೆ. ಅದಕ್ಕಿಂತ ಪೂರ್ವದಲ್ಲಿ ಇದೇ ಮಹೇಶ, ತನ್ನ ಸೋದರತ್ತೆ ಮಗಳನ್ನ ಮದುವೆಯಾಗಿದ್ದು ಉಂಟು.
ಪಡ್ಡಂಗಡಿಯ ವಿಜಯಲಕ್ಷ್ಮಿಗೆ ಅದಾಗಲೇ ಎರಡು ಗಂಡು ಮಕ್ಕಳಿದ್ದಾರೆ. ಗಂಡ ಕುಡಿದು ಗಲಾಟೆ ಮಾಡುತ್ತಿದ್ದರಿಂದ ಆತ ಬಿಟ್ಟು ಹೋದ ಕೂಡ. ಅಲ್ಲಿಂದ ವಿಜಯಲಕ್ಷ್ಮಿಯ ಸಂಪರ್ಕ ಹೆಚ್ಚಾಗಿದೆ ಎನ್ನಲಾಗ್ತಿದೆ.
ನವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಧರನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ವಿಜಯಲಕ್ಷ್ಮಿ ಪ್ರಕರಣವೇ ಮಹೇಶನನ್ನ ವಿದ್ಯಾನಗರ ಪೊಲೀಸ್ ಠಾಣೆಯಿಂದ ಧಾರವಾಡದ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವಂತಾಗಿದೆ ಎಂಬ ಮಾತು ಕೂಡಾ ಇದೆ.
ಇಷ್ಟೇಲ್ಲದರ ನಡುವೆ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಇದೇ ತಿಂಗಳ 16ಕ್ಕೆ ಡ್ಯೂಟಿ ನೇಮಕ ಮಾಡಲಾಗಿತ್ತಾದರೂ, ಆತ ಹಾಜರಾಗಿಲ್ಲ. ತದನಂತರ ಮಹೇಶ, ಡ್ಯೂಟಿಗೆ ಬಂದನೋ, ಇಲ್ಲವೋ ಆ ಮಾಹಿತಿಯೂ ಗೊತ್ತಿರಬೇಕಾದವರಿಗೆ ಗೊತ್ತೆ ಆಗಿಲ್ಲ.
ಮಹೇಶ ಹೆಸರೂರ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊರಗೆ ಬಂದ ನಂತರವೇ, ಆತನ ವಿವರವನ್ನ ತಡಕಾಡಲಾಗಿದೆ. ವಿಜಯಲಕ್ಷ್ಮಿ ತನ್ನ ಎರಡು ಮಕ್ಕಳನ್ನ ಅನಾಥ ಮಾಡಿ ಇನ್ನಿಲ್ಲವಾಗಿದ್ಸಾಳೆ, ಈಕೆಯ ಜೊತೆಗೆ ಒಂದೇ ವೇಲ್‌ನಲ್ಲಿ ನೇಣಿಗೆ ಕೊರಳೊಡ್ಡಿದ ಪೊಲೀಸ್ ಮಹೇಶ ಕೂಡಾ ಕಟ್ಟುತ್ತಿರುವ ಮನೆಯನ್ನ ಅರ್ಧಕ್ಕೆ ತಂದು ಹೊರಟು ಬಿಟ್ಟಿದ್ದಾನೆ. ಆತನ ಕುಟುಂಬದ ಬಡತನ ಮತ್ತೆ ಹಾಗೇ ಉಳಿಯಲಿದೆ.
ಸಮಾಜದ ಮುಖ್ಯ ಸ್ಥರದಲ್ಲಿರುವ ಹುದ್ದೆ ಹೊಂದುವ ಮೊದಲು ಮತ್ತೂ ನಂತರ ತಮ್ಮ ಜೀವನದ ಉದ್ದೇಶವನ್ನ ಬದಲಿಸಿಕೊಂಡಾಗ ಮಾತ್ರ ಇಂತಹ ಘಟನೆಗಳು ನಡೆಯಲು ಸಾಧ್ಯ. ಪ್ರಜ್ಞಾವಂತರ ಜಾಗದಲ್ಲಿ ಕೂಡುವ ಪ್ರತಿಯೊಬ್ಬರು ಸಮಾಜದಲ್ಲಿ ಗೌರವದಿಂದ ಜೀವಿಸುವ ಅವಶ್ಯಕತೆಯನ್ನ ಅರಿಯಬೇಕಿದೆ.