ನವಲಗುಂದ ತಾಪಂ ಕಚೇರಿ ಕಟ್ಟಡದಲ್ಲೇ “ನೌಕರನ ಆತ್ಮಹತ್ಯೆ”..

ನವಲಗುಂದ: ಕೌಟುಂಬಿಕ ಕಾರಣದಿಂದ ಬೇಸತ್ತ ತಾಲ್ಲೂಕು ಪಂಚಾಯತ ನೌಕರನೋರ್ವ ಕಚೇರಿಯ ಸ್ಟೋರ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಸಕ್ರೇಪ್ಪ ಎಂಬ ನೌಕರನೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಮಸ್ಕಿಯವರಾದ ಸಕ್ರೇಪ್ಪ ಪಂಚಾಯತಿಗಳ ಮಾಹಿತಿ ಕ್ರೋಡಿಕರಿಸುವ ಕೆಲಸ ನಿರ್ವಹಿಸುತ್ತಿದ್ದರು.
ಮದ್ಯ ಸೇವನೆ ಮಾಡಿ ಮಡದಿಯೊಂದಿಗೆ ಜಗಳ ಮಾಡಿ ಕಚೇರಿಗೆ ಬಂದು ನೇಣಿಗೆ ಶರಣಾಗಿದ್ದಾನೆ. ಮಡದಿ ಕಚೇರಿಗೆ ಬಂದು ಸಂಬಂಧಿಸಿದ ಅಧಿಕಾರಿಗೆ ಮಾಹಿತಿ ಕೊಡುತ್ತಿದ್ದಾಗಲೇ ಹಿಂಬದಿ ಕೋಣೆಯಲ್ಲಿ ಸಾವಿಗೀಡಾದ್ದಾರೆ.
ನವಲಗುಂದ ಠಾಣೆ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.