ಕಂಟ್ರೋಲರ್, ಮ್ಯಾನೇಜರ್ ಕಿರುಕುಳ KSRTC ನೌಕರ ನೇಣಿಗೆ ಶರಣು…!!!

ಬಾಗಲಕೋಟೆ : ಮೇಲಧಿಕಾರಿಗಳ ಕಿರುಕುಳಕ್ಕೆ ನೊಂದು KSRTC ನೌಕರ ಸೂಸೈಡ್ ಮಾಡಿಕೊಂಡಿರು ಘಟನೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ರೊಳ್ಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಶ್ರೀಶೈಲ ಬಸಯ್ಯ ವಿಭೂತಿ ಆತ್ಮಹತ್ಯೆಗೆ ಶರಣಾದವರು.
ಶ್ರೀಶೈಲ ಬಸಯ್ಯ ಬೀಳಗಿ ನಗರದಲ್ಲಿರುವ ತಮ್ಮ ಬಾಡಿಗೆ ನಿವಾಸದಲ್ಲಿ ನೇಣಿಗೆ ಶರಣಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ಬಸಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡಿಸ್ಟ್ರಿಕ್ಟ್ ಕಂಟ್ರೋಲರ್, ಡಿಪೋ ಮ್ಯಾನೇಜರ್ ವಿರುದ್ಧ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದ್ದು, ಸ್ಥಳಕ್ಕೆ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀಶೈಲ ಬಸಯ್ಯ 2022ರಲ್ಲೂ ಇದೇ ರೀತಿ ಕಿರುಕುಳ ಆರೋಪ ಮಾಡಿದ್ದರು. ಅಧಿಕಾರಿಗಳ ವಿರುದ್ಧ ಸಂಬಂಧಿಕರು ಕಿರುಕುಳದ ಆರೋಪ ಮಾಡಿದ್ದಾರೆ.