ಬೀಗರ ಮನೆಯ ಬಾವಿಯಲ್ಲೇ ಜಿಗಿದು ಆತ್ಮಹತ್ಯೆ.. ಹುಬ್ಬಳ್ಳಿಯಲ್ಲಿ ದುರಂತ..!

ಹುಬ್ಬಳ್ಳಿ: ತಮ್ಮದೇ ಮನೆಗೆ ಅಂಟಿಕೊಂಡಿದ್ದಬೀಗರ ಮನೆಯಲ್ಲಿನ ಬಾವಿಗೆ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಮಂಗಳವಾರ ಪೇಟೆಯಲ್ಲಿ ನಡೆದಿದೆ.
65 ವಯಸ್ಸಿನ ಶಿವಲಿಂಗಪ್ಪ ಎಂಬುವವರೇ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕವಾಗಿ ಜರ್ಝರಿತಗೊಂಡಿದ್ದ ಶಿವಲಿಂಗಪ್ಪನವರು ಕಳೆದ ಒಂದು ತಿಂಗಳಿಂದ ಬೇಸರಗೊಂಡಂತೆ ಜೀವನ ನಡೆಸುತ್ತಿದ್ದರು.
ಇಂದು ಸಂಜೆ ಏಕಾಏಕಿ ತಮ್ಮ ಮನೆಗೆ ಅಂಟಿಕೊಂಡ ಮನೆಯ ಪಕ್ಕದಲ್ಲಿರುವ ಬೀಗರ್ ಮನೆಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾವಿಗೆ ಬಿದ್ದ ಶಬ್ದವನ್ನು ಕೇಳಿ ಮನೆಯವರು ಓಡಿ ಹೋಗಿ ಹಗ್ಗವನ್ನು ಎಸೆದಿದ್ದಾರೆ. ಆದ್ರೆ, ಕೆಲವು ಕ್ಷಣ ಹಗ್ಗವನ್ನು ಹಿಡಿದ ಶಿವಲಿಂಗಪ್ಪನವರು ಮತ್ತೇ ಹಗ್ಗವನ್ನು ಬಿಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 150 ಅಡಿ ಉದ್ದದ ಬಾವಿಯಲ್ಲಿದ್ದ ಶಿವಲಿಂಗಪ್ಪ ಅವರ ಶವವನ್ನು ತೆಗೆದಿದ್ದಾರೆ.
ಹುಬ್ಬಳ್ಳಿಯ ಘಂಟಿಕೇರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನ ಕಿಮ್ಸಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಿದ್ದಾರೆ.