ಹುಬ್ಬಳ್ಳಿಯಲ್ಲಿ ಕೈಕೈ ಹಿಡಿದ “ಪ್ರೇಮಿಗಳು” ನೇಣಿಗೆ ಶರಣು…

ಹುಬ್ಬಳ್ಳಿ: ಎಲ್ಲಿಂದಲೋ ಬಂದವರನ್ನ ಅವರ ಸ್ಥಳಕ್ಕೆ ಬಿಡದೇ, ತನ್ನದೇ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟ ಆಟೋ ಚಾಲಕನ ಮನೆಯಲ್ಲಿ ಪ್ರೇಮಿಗಳು ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯ ಮೊರಾರ್ಜಿ ನಗರದಲ್ಲಿ ನಡೆದಿದೆ.
ಇಳಿಸಂಜೆ ಅಟೋದಲ್ಲಿ ಬಂದು ಅಟೋದವನ ಮನೆಯಲ್ಲಿಯೇ ಪ್ರೆಶ್ ಅಪ್ ಆಗುತ್ತೇವೆಂದು ಹೇಳಿ, ಅದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ ಎಂದು ತಿಳಿದು ಬಂದಿದೆ. ಆದರೆ, ಯುವತಿ ಯಾರು ಎನ್ನುವುದು ಗೊತ್ತಾಗಿಲ್ಲ. ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.