Posts Slider

Karnataka Voice

Latest Kannada News

ಹೆಬ್ಬಳ್ಳಿ ಫಾರ್ಮನ  “ಊರ ಮಗ” ನೇಣಿಗೆ ಶರಣು..!

1 min read
Spread the love

ಧಾರವಾಡ: ಎಲ್ಲರೊಂದಿಗೆ ಬೆರೆತು ನಗು ನಗುತ್ತಲೇ ಜೀವನ ನಡೆಸುತ್ತಿದ್ದ ವಿಕಲಚೇತನ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಲ್ಲಿ ನಡೆದಿದೆ.

ಪುಂಡಲೀಕ ಕಲ್ಲಪ್ಪ ನವಗುಂಡ ಎಂಬ ವಿವಾಹಿತ ವಿಕಲಚೇತನ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿಯೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಪುಂಡಲೀಕನ ಮಡದಿ ಕೆಲವು ದಿನಗಳಿಂದ ತವರು ಮನೆಗೆ ಹೋಗಿದ್ದರಿಂದ ಬೇಸತ್ತಿದ್ದ. ಆದರೆ, ಸ್ಥಳೀಯ ನಿವಾಸಿಗಳೊಂದಿಗೆ ನಗು ನಗುತ್ತಲೇ ಇರುತ್ತಿದ್ದ. ಯಾರೊಂದಿಗೂ ಸಣ್ಣ ಮನಸ್ತಾಪವನ್ನ ಹೊಂದಿರಲಿಲ್ಲವೆಂದು ಹೇಳಲಾಗಿದೆ.

ಮಗುವೊಂದನ್ನ ಹೊಂದಿರುವ ಪುಂಡಲೀಕನ ಆತ್ಮಹತ್ಯೆ ಹೆಬ್ಬಳ್ಳಿ ಫಾರ್ಮ್ ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *

You may have missed