ಕುಡಿಯಬೇಡಾ ಎಂದಿದ್ದಕ್ಕೆ ಕಲ್ಲೂರಲ್ಲಿ ನೇಣಿಗೆ ಶರಣಾದ ‘ಶರಾಬೀ’….

ಧಾರವಾಡ: ತಾಲೂಕಿನ ಕಲ್ಲೂರ ಗ್ರಾಮದಲ್ಲಿ ವ್ಯಕ್ತಿಯೋರ್ವ ಕುಡಿಯುವುದನ್ನ ಬಿಡು ಎಂದು ಹೇಳಿದ್ದನ್ನೇ ಮನಸ್ಸಿಗೆ ಹಚ್ಚಿಕೊಂಡು ನೇಣಿಗೆ ಶರಣಾದ ಘಟನೆ ಸಂಭವಿಸಿದೆ.

ಕಲ್ಲೂರ ಗ್ರಾಮದ ಶ್ರೀಶೈಲ್ ಮಡಿವಾಳೆಪ್ಪ ಕುರುಬಗಟ್ಟಿ ಎಂಬ 36 ವಯಸ್ಸಿನ ವ್ಯಕ್ತಿಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ. ನಿರಂತರ ಮದ್ಯ ಸೇವನೆ ಮಾಡಿ ಆರೋಗ್ಯವನ್ನ ಹಾಳು ಮಾಡಿಕೋ ಬೇಡಾ ಎಂದಿದ್ದನ್ನೇ, ಮನಸ್ಸಿಗೆ ಹಚ್ಚಿಕೊಂಡು ಅಟ್ಟದ ಮೇಲೆ ಹೋಗಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾನೆ.
ಗರಗ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಲ್ಲದೇ, ಪ್ರಕರಣವನ್ನ ದಾಖಲು ಮಾಡಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.