ಧಾರವಾಡದಲ್ಲಿ ಕರುಣಾಜನಕ ಘಟನೆ- ಶವ ಹೂಳಲು ಹಣವಿಲ್ವಂತೆ: ಮಹಿಳಾ ಸಂಘಗಳ ಸಾಲದ ಶೂಲ…

ಧಾರವಾಡ: ಮಹಿಳಾ ಸ್ವ ಸಹಾಯ ಸಂಘದಲ್ಲಿ ಸಾಲ ಪಡೆದು ಸಂಕಷ್ಟಕ್ಕೀಡಾದ ಮಹಿಳೆಯೊಬ್ಬಳು ನೇಣು ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ರಾಜನಗರದಲ್ಲಿ ಸಂಭವಿಸಿದೆ.
ಸುಂದರವ್ವ ಗಂಬೇರ ಎಂಬ ಮಹಿಳೆಯೇ ನೇಣು ಹಾಕಿಕೊಂಡ ಆತ್ಮಹತ್ಯೆಗೆ ಶರಣಾದ ದುರ್ಧೈವಿಯಾಗಿದ್ದಾಳೆ. ಸ್ವ ಸಹಾಯ ಸಂಘದಲ್ಲಿ ಮಾಡಿದ್ದ ಸಾಲ ಮತ್ತು ತನ್ನಿಂದ ಹಣ ಪಡೆದವರು ವಾಪಸ ಕೊಡದ ಹಿನ್ನೆಲೆ ಸುಂದರವ್ವ ಸಂಕಷ್ಟಕ್ಕೀಡಾದ್ದಳೆಂದು ಡೆತ್‌ನೋಟ್‌ನಲ್ಲಿದೆ.
ಆರ್ಥಿಕವಾಗಿ ಸಂಕಷ್ಟ ಎದುರಾದ ಹಿನ್ನೆಲೆ ಅನೇಕರು ನಿಂದಿಸುತ್ತಿದ್ದು, ಇದರಿಂದ ಬೇಸರವಾಗಿದ್ದನ್ನ ಮಹಿಳೆ ಬರೆದುಕೊಂಡಿದ್ದಾಳೆ. ಅಷ್ಟೇ ಅಲ್ಲ, ನಿಧನದ ನಂತರ ಮೃತದೇಹ ಆಸ್ಪತ್ರೆಗೆ ಕೊಡಿ, ಶವ ಸಂಸ್ಕಾರ ಮಾಡಲು ಹಣವಿಲ್ಲವೆಂದಿದ್ದಾಳೆ.
ಧಾರವಾಡ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.