ಧಾರವಾಡ “ಡಿಸಿ ಕಂಪೌಂಡ”ನಲ್ಲಿ ನೇಣಿಗೆ ಶರಣಾದ ‘ಹುಡೇದ’…!!

ಧಾರವಾಡ: ಜಿಲ್ಲಾಧಿಕಾರಿಗಳ ನಿವಾಸದ ಕಂಪೌಂಡಿನಲ್ಲಿ ಧಾರವಾಡದ ಜನ್ನತನಗರದ ಯುವಕನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.

ಇಂದು ಮಧ್ಯಾಹ್ನ ಕಂಪೌಂಡಿನೊಳಗೆ ಒಳನುಗ್ಗಿರುವ ಸುಮಾರು 20 ವರ್ಷದ ತೌಹೀದ ಹುಡೇದ ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿಯಾಗಿದ್ದಾನೆ.
ಯಾವ ಕಾರಣಕ್ಕೆ ಅಲ್ಲಿ ಹೋಗಿ ಆತ್ಮಹತ್ಯೆ ಮಾಡಿಕೊಂಡ ಎಂಬ ಬಗ್ಗೆಯೂ ಉಪನಗರ ಠಾಣೆ ಪೊಲೀಸರು ತನಿಖೆಯನ್ನ ಆರಂಭಿಸಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.