ಠಾಣೆಯಲ್ಲಿ ಬ್ಲೇಡ್ ಹಾಕಿಕೊಂಡರೂ “ಕಿಸ್‌ಕ್” ಎನ್ನದವರು… ಕರ್ನಾಟಕವಾಯ್ಸ್.ಕಾಂನಲ್ಲಿ ಬಂದಿದ್ದೆ ತಡ, FIR ದಾಖಲು…?

ಹುಬ್ಬಳ್ಳಿ: ಪೊಲೀಸರ ಸುಪರ್ಧಿಯಲ್ಲಿಯೇ ಕುತ್ತಿಗೆಗೆ ಬ್ಲೇಡ್ ಹಾಕಿಕೊಂಡ ಪ್ರಕರಣವನ್ನ ಕಂಡು ಕಾಣದಂತೆ ಕೂತಿದ್ದ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರಗೆ ಪೊಲೀಸ್ ಕಮೀಷನರ್ “ಕರ್ತವ್ಯದ” ಸ್ಮರಣೆ ಮಾಡುವಂತೆ ಮಾಡಿದ್ದಾರೆಂದು ಗೊತ್ತಾಗಿದೆ.

ರಾಘವೇಂದ್ರ ನಾಯಕ ಎಂಬ ಯುವಕ ಬಿರಿಯಾನಿ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದಾಗ, ಮಾಲೀಕ ಆತನಿಗೆ ಎಚ್ಚರಿಸಲು ಠಾಣೆಗೆ ತಂದಿದ್ದ. ಅದೇ ಸಮಯದಲ್ಲಿ ರಾಘವೇಂದ್ರ ಕುತ್ತಿಗೆಗೆ ಬ್ಲೇಡ್ ನಿಂದ ಹರಿದುಕೊಂಡು, ಆತ್ಮಹತ್ಯೆಗೆ ಯತ್ನಿಸಿದ.
ಈ ವಿಷಯ ನಡೆದು ಹದಿನೆಂಟು ಗಂಟೆಗಳು ಕಳೆದರೂ ಹಳೇಹುಬ್ಬಳ್ಳಿ ಠಾಣೆ ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ ಯಾವುದೇ ಕ್ರಮವನ್ನ ಜರುಗಿಸರಲಿಲ್ಲ. ಈ ವಿಷಯವನ್ನ ಕರ್ನಾಟಕವಾಯ್ಸ್.ಕಾಂ ಯಾವಾಗ ಹೊರ ಹಾಕಿತೋ, ಆಗ ಆತ್ಮಹತ್ಯೆಗೆ ಯತ್ನಿಸಿದವನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆಂದು ಹೇಳಲಾಗಿದೆ.
ಪಾಪ… ಇನ್ಸಪೆಕ್ಟರ್ ರಾಘವೇಂದ್ರ ಹಳ್ಳೂರ ಅವರು ಕೆಲಸ ಮಾಡಬೇಕಾದರೇ, ಅದು ಮಾಧ್ಯಮಗಳಲ್ಲಿ ಬರಬೇಕು ಅನಿಸತ್ತೆ…