ಬಿಡ್ನಾಳ ಬಳಿ “ವಿದ್ಯುತ್ ಟವರ್” ಏರಿ ಆತ್ಮಹತ್ಯೆಗೆ ಯತ್ನಿಸಿದ ‘ರಾಘವೇಂದ್ರ’…

ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೋರ್ವ 11 ಕೆವಿ ವಿದ್ಯುತ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬಿಡ್ನಾಳದ ಬಳಿ ಸಂಭವಿಸಿದೆ.
ಕುಟುಂಬದಲ್ಲಿನ ವೈಮನಸ್ಸಿಂದ ಬೇಸತ್ತು ರಾಘವೇಂದ್ರ ಬಳ್ಳಾರಿ ಎಂಬಾತ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಇದನ್ನ ನೋಡಿದ ಸಾರ್ವಜನಿಕರು ಗ್ರಾಮೀಣ ವಿಭಾಗದ ಎಇಇ ಕಿರಣಕುಮಾರ ಎಂಬುವವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಜಾಗೃತರಾದ ಕಿರಣಕುಮಾರ ಅವರ ಆ ಭಾಗದ ಬಹುತೇಕ ವಿದ್ಯುತ್ ಸಂಪರ್ಕ ನಿಲುಗಡೆ ಮಾಡಿಸಿದ್ದಾರೆ. ಇದರಿಂದ ರಾಘವೇಂದ್ರ ಬಚಾವ್ ಆಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಕೂಡಾ ಆಗಮಿಸಿ, ರಾಘವೇಂದ್ರನನ್ನ ಮನೆಗೆ ರವಾನಿಸಿದ್ದಾರೆ.