ಹಂಚಿನಮನಿ ಕಾಲೇಜು ಅಧ್ಯಕ್ಷ ಸುಧೀಂದ್ರ ಹಂಚಿನಮನಿ ಇನ್ನಿಲ್ಲ
1 min readಧಾರವಾಡ: ನಗರದ ಎನ್ ಟಿಟಿಎಫ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಶಾಂತೇಶ ಎಜ್ಯುಕೇಶನ್ ಸೊಸಾಯಟಿಯ ವಿದ್ಯಾ ಪಿ.ಹಂಚಿನಮನಿ ಇಂಡಿಪೆಂಡೆಟ್ ಪಿಯು ಕಾಲೇಜಿನ ಅಧ್ಯಕ್ಷ ಇನ್ನಿಲ್ಲವಾಗಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದ ಬಿಆರ್ ಟಿಎಸ್ ಜಿಗರಿ ಬಸ್ಸು, ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸುದೀಂದ್ರ ರಾಮರಾವ ಹಂಚಿನಮನಿ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಜಿಗರಿ ಬಸ್ ಚಾಲಕನ ಅಜಾಗರೂಕತೆಯಿಂದಲೇ ಪಾದಚಾರಿಯಾಗಿದ್ದ ಸುದೀಂದ್ರ ಹಂಚಿನಮನಿ ಹಾಗೂ ಸೆಕ್ಯುರಿಟಿ ಪಾಪು ಎನ್ನುವವರಿಗೆ ಬಸ್ ಡಿಕ್ಕಿ ಹೊಡೆದಿತ್ತು. ತಕ್ಷಣವೇ ಬಿಆರ್ ಟಿಎಸ್ ವಾಹನದಲ್ಲೇ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ಅವರನ್ನ ಸತ್ತೂರ ಬಳಿಯಿರುವ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ತೀವ್ರವಾದ ರಕ್ತಸ್ರಾವವಾಗುತ್ತಿದ್ದ ಸಮಯದಲ್ಲೇ ಆಸ್ಪತ್ರೆಯಿಂದ ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣದಲ್ಲಿ ಜಿಗರಿ ಬಸ್ ಚಾಲಕ ಪರಾರಿಯಾಗಿದ್ದು, ಪ್ರಕರಣ ಧಾರವಾಡ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.