ಕಳ್ಳರೊಂದಿಗೆ ಪೊಲೀಸರ ಸೋಷಿಯಲ್ ಡಿಸ್ಟನ್ಸ್ ಪೋಟೊ ಸೆಷನ್: ಹೇಗಿದೆ ಗೊತ್ತಾ ದೋಚುಕೋರರ ಅಸಲಿಯತ್ತು..
ಹುಬ್ಬಳ್ಳಿ: ಜನತಾ ಬಜಾರದಲ್ಲಿ ಜನರಿಂದ ಹಣ ಮತ್ತು ಮೊಬೈಲ್ ದೋಚುತ್ತಿದ್ದ ಮೂವರನ್ನ ಬಂಧಿಸುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳರೊಂದಿಗೆ ಪೋಟೋ ಸೆಷನ್ ಮಾಡುವಾಗ ಸೋಷಿಯಲ್ ಡಿಸ್ಟನ್ಸ್ ಕೂಡಾ ಮಾಡಿದ್ದಾರೆ.
ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನತಾ ಬಜಾರದಲ್ಲಿ ಸಂತೆಗೆ ಬರುವ ಗ್ರಾಮೀಣ ಪ್ರದೇಶದ ಜನರನ್ನ ಗಟ್ಟಿಯಾಗಿ ಹಿಡಿದುಕೊಂಡು ಹಣ, ಮೊಬೈಲ್ ದೋಚುತ್ತಿದ್ದ ತಂಡವನ್ನ ಬಂಧಿಸಿದ್ದು, ಅವರಿಂದ 12 ಸಾಔಇರ ರೂಪಾಯಿ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಸೆಟ್ಲಮೆಂಟಿನ ರೋಹಿತ ಅಲಿಯಾಸ್ ರೋಹ್ಯಾ ಜಾಧವ, ಗಿರಣಿಚಾಳದ ಪ್ರಕಾಶ ಬೊಮ್ಮನಾಳ ಹಾಗೂ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಅಣ್ಣಪ್ಪ ವಡ್ಡರ ಬಂಧಿತ ಆರೋಪಿಗಳಾಗಿದ್ದಾರೆ.
ಇನ್ಸಪೆಕ್ಟರ್ ಎಸ್.ಕೆ.ಹೊಳೆಣ್ಣನವರ ನೇತೃತ್ವದಲ್ಲಿ ಪಿಎಸೈಗಳಾದ ಸೀತಾರಾಮ್, ಅಶೋಕ ಬಿಎಸ್‍ಪಿ, ಸುನೀಲ್ ಎಸ್ ಪಾಂಡೆ, ಮಲ್ಲಿಕಾರ್ಜುನ್ ಧನಿಗೊಂಡ, ಮಂಜುನಾಥ ಯಕ್ಕಡಿ, ಕರಬಸಪ್ಪ.ಎನ್. ನೆಲಗುಡ್ಡ, ಬಸವರಾಜ ಸುಣಗಾರ, ಉಮೇಶ ಹೆದ್ದೇರಿ, ರೇಣಪ್ಪ ಸಿಕ್ಕಲಗಾರ, ರವಿ ಹೊಸಮನಿ, ಮಾಬುಸಾಬ ಮುಲ್ಲಾ, ಮಂಜು ಕಮತದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಹಿಂದೆ ಕಳ್ಳನನ್ನ ಹಿಡಿದು ಇದೇ ಠಾಣೆಯ ಹಲವರು ಕೊರೋನಾ ಅಂಟಿಸಿಕೊಂಡಿದ್ದರು. ಹೀಗಾಗಿ ಈ ಬಾರಿ ಕಳ್ಳರೊಂದಿಗಿನ ಪೋಟೊ ತೆಗೆಸಿಕೊಳ್ಳುವಾಗಲೂ ಮಾಸ್ಕ್ ಧರಿಸಿ, ಸೋಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಿದ್ದರು.