ಬೈಕ್ ಸ್ಕೀಡ್: ಉಪನಗರ ಠಾಣೆ ಪೊಲೀಸಗೆ ಕಾಲು ಮುರಿತ

ಧಾರವಾಡ: ಕರ್ತವ್ಯ ಹಾಜರಾಗಲು ಬರುತ್ತಿದ್ದ ಉಪನಗರ ಠಾಣೆಯ ಪೊಲೀಸರೋರ್ವರ ದ್ವಿಚಕ್ರವಾಹನ ಆಯತಪ್ಪಿ ಬಿದ್ದು ಕಾಲಿಗೆ ತೀವ್ರವಾದ ಗಾಯಗಳಾದ ಘಟನೆ ನಡೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಪನಗರ ಪೊಲೀಸ್ ಠಾಣೆಯ ಪಕ್ಕೀರಗೌಡ ಪಾಟೀಲ ಎಂಬ ಪೊಲೀಸ್ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಕ್ ಬಿದ್ದ ಪರಿಣಾಮ ಬಲಗಾಲಿಗೆ ತೀವ್ರವಾದ ಗಾಯಗಳಾಗಿದ್ದು, ಪೂರಕವಾದ ಚಿಕಿತ್ಸೆಯನ್ನ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ.
ಸರಿಯಾದ ಸಮಯಕ್ಕೆ ಬರುವ ಗಡಿಬಿಡಿಯಲ್ಲಿ ಬೈಕನ್ನ ವೇಗವಾಗಿ ಚಲಾಯಿಸಿಕೊಂಡು ಬರುತ್ತಿರುವುದು ಬಹುತೇಕರಿಗೆ ರೂಢಿಯಾಗಿರುತ್ತದೆ. ಈ ಘಟನೆ ಮಾತ್ರ ಅದಕ್ಕೆ ತದ್ವಿರುದ್ಧವಾಗಿದೆ. ವಾಹನ ವೇಗವಾಗಿ ಇಲ್ಲದಿದ್ದರೂ, ಆಯತಪ್ಪಿ ಬೀಳಲಾಗಿದೆ.
ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಶಹರ ಠಾಣೆಯ ನಾಯಕ ಎಂಬುವವರು ಕೂಡಾ, ಧಾರವಾಡಕ್ಕೆ ಕರ್ತವ್ಯ ನಿರ್ವಹಿಸಲು ಆಗಮಿಸಿ, ಮರಳಿ ಹೋಗುವಾಗ ಆರ್ ಟಿಓ ಕಚೇರಿ ಬಳಿ ಅಪಘಾತಕ್ಕೀಡಾಗಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.
ಪೊಲೀಸ್ ಪಕ್ಕೀರಗೌಡ ಪಾಟೀಲ ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೂ ಹಿರಿಯ ಅಧಿಕಾರಿಗಳು ತಾಕೀತು ಮಾಡಿದ್ದು, ಯಾವುದೇ ಕಾರಣಕ್ಕೂ ವಾಹನವನ್ನ ವೇಗವಾಗಿ ಚಲಾಯಿಸಬೇಡಿ ಎಂದು ಹೇಳಿದ್ದಾರೆ.