ವೈಷ್ಣವಿ,ಅಮೃತಾ,ಸುಷ್ಮಾ,ಪವಿತ್ರಾ,ಐಶ್ವರ್ಯ- ಪ್ರತಿಭಾವಂತರು: ಮಕ್ಕಳಿಗೆ ಪ್ರೋತ್ಸಾಹ ಸಿಕ್ಕಿದ್ದೇಲಿ..?
ಹುಬ್ಬಳ್ಳಿ: ಹತ್ತನೇ ವರ್ಗದಲ್ಲಿ ಪಾಸಾದ ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ನಗದು ಪ್ರೋತ್ಸಾಹ ನೀಡುವ ಕಾರ್ಯಕ್ರಮ ತಾಲೂಕು ಪಂಚಾಯತಿ ಕಚೇರಿಯಲ್ಲಿ ನಡೆಯಿತು.

ಅದರಗುಂಚಿ ಗ್ರಾಮದ GHS ವಿದ್ಯಾರ್ಥಿನಿ ವೈಷ್ಣವಿ ದಾನಪ್ಪಗೌಡರ, ನೂಲ್ವಿ ಗಂಗಾಧರ ಆಂಗ್ಲ ಮಾಧ್ಯಮ ಶಾಲೆಯ ಅಮೃತಾ ಅರಳಿಮಠ, ಕಿರೇಸೂರ ಗ್ರಾಮದ GHS ವಿದ್ಯಾರ್ಥಿನಿ ಸುಷ್ಮಾ ಹೂಲಿಕಟ್ಟಿ, ಬೆಳಗಲಿ ಗ್ರಾಮದ GHS ವಿದ್ಯಾರ್ಥಿನಿ ಪವಿತ್ರಾ ಏಸನ್ನವರ ಹಾಗೂ ನೂಲ್ವಿ ಗ್ರಾಮದ ಐಶ್ವರ್ಯ ಮಠಪತಿ ಐದು ಸಾವಿರ ರೂಪಾಯಿ ನಗದು ಪ್ರೋತ್ಸಾಹಕ್ಕೆ ಆಯ್ಕೆಯಾಗಿದ್ದರು.

ಧಾರವಾಡ ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ದೀಪಕ, ಸಹಾಯಕ ಯೋಜನಾಧಿಕಾರಿ ಸಂತೋಷ, ಹುಬ್ಬಳ್ಳಿ ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ.ಸವದತ್ತಿ, ಗ್ರಾಮೀಣ ವಲಯದ ಬಿಇಓ ಅಶೋಕಕುಮಾರ ಸಿಂದಗಿ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ ಸೇರಿದಂತೆ ವಿದ್ಯಾರ್ಥಿಗಳಿಗೆ ಪುರಸ್ಕರಿಸಿದರು.
