“ಆತನ” ಕೊಲೆ ನಡೆದದ್ದೇ ಲಕ್ಷ ರೂಪಾಯಿಗಾಗಿ: ಸಾಯುವಾಗ “ಆತ” ರಕ್ತದ ಮಡುವಿನಲ್ಲಿ ಹೊರಳಾಡಿದ್ದ..!
1 min readಕಲಬುರಗಿ: ಕಳೆದ ನಾಲ್ಕು ದಿನದ ಹಿಂದೆ ಪಬ್ಲಿಕ್ ಗಾರ್ಡನ್ ಮುಂದೆ ಜನರಿದ್ದಾಗಲೇ ಚಾಕು ಹಾಕಿ ಪರಾರಿಯಾಗಿದ್ದ ನಾಲ್ವರನ್ನ ಬಂಧಿಸುವಲ್ಲಿ ನ್ಯೂ ರಾಘವೇಂದ್ರನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಲಬುರಗಿ ನಗರದ ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಸರನಲ್ಲಿ ಬಂದ ನಾಲ್ವರು, ವೀರೇಶ ಎಂಬ ವಿದ್ಯಾರ್ಥಿಯನ್ನ ಹರಿತವಾದ ಆಯುಧದಿಂದ ಚುಚ್ಚಿ ಪರಾರಿಯಾಗಿದ್ದರು. ವೀರೇಶ, ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡಿದ್ದ ವೀರೇಶನನ್ನ ಯಾರೂ ಆಸ್ಪತ್ರೆಗೆ ಸಾಗಿಸದ ಪರಿಣಾಮ, ಅತೀವ ರಕ್ತಸ್ರಾವವಾಗಿ ಸಾವಿಗೀಡಾಗಿದ್ದ.
ಅಂದು ಹತ್ಯೆ ಮಾಡಿ ಪರಾರಿಯಾಗಿದ್ದ ಅಂಬರೀಶ್ @ ಕಾರಪುಡಿ ಅಂಬು, ಶ್ರೀಕಾಂತ್ @ ಕಾಳ್ಯಾ, ಲವ್ಯಾ @ ಲವಕುಶ, ಗೀರಿ @ ಗೀರಿರಾಜ್ ಎಂಬ ನಾಲ್ವರನ್ನ ಬಂಧನ ಮಾಡಲಾಗಿದೆ.
ವಿದ್ಯಾರ್ಥಿಯಾಗಿದ್ದ ವೀರೇಶನಿಗೆ ಒಂದು ಲಕ್ಷ ರೂಪಾಯಿ ಡಿಮ್ಯಾಂಡ್ ಟೀಂಗೆ ವೀರೇಶ ಹಣ ನೀಡಿರಲಿಲ್ಲ. ಅದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಕೊಲೆಪಾತಕರು ಬಾಯಿಬಿಟ್ಟಿದ್ದಾರೆ.
ಇನ್ಸಪೆಕ್ಟರ್ ಅರುಣ ಮುರಗುಂಡಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಶಿವಪ್ರಕಾಶ, ಸುರೇಶ, ರಾಮು ಪವಾರ, ಭೀಮನಾಯಕ ಹಾಗೂ ಸಂಜೀವಕುಮಾರ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.