ಇರ್ಫಾನ್ ಹತ್ಯೆಯಲ್ಲಿ ಇಬ್ಬರು ವಿದ್ಯಾರ್ಥಿಗಳು..! 3 ಪಿಸ್ತೂಲು, 7ಜೀವಂತ ಗುಂಡು ವಶ- ಸಿಕ್ಕ ಎಲ್ಲರ ಭಾವಚಿತ್ರವಿಲ್ಲಿದೆ..
ಹುಬ್ಬಳ್ಳಿ: ಇರ್ಫಾನ್ ಹಂಚಿನಾಳ ಅಲಿಯಾಸ್ ಪ್ರೂಟ್ ಇರ್ಫಾನ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಐವರಲ್ಲಿ ಇಬ್ಬರು ವಿದ್ಯಾರ್ಥಿಗಳೇ ಇದ್ದು, ಬಂಧಿತರ ಬಳಿ ಮೂರು ಪಿಸ್ತೂಲು ಸೇರಿದಂತೆ ಏಳು ಜೀವಂತ ಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತ ಐವರನ್ನ ಸಾಪ್ಟವೇರ್ ಅನಲೈಸರ್ ಆಗಿದ್ದ ಧಾರವಾಡ ಮಣಕಿಲ್ಲಾ ನಿವಾಸಿ ಅಫ್ತಾಬ ಮಹಮ್ಮದಲಿ ಬೇಪಾರಿ, ಸ್ಕ್ರ್ಯಾಫ್ ವ್ಯವಹಾರ ಮಾಡುತ್ತಿದ್ದ ಧಾರವಾಡ ಶೇಖ ಕಂಪೌಂಡ ಮಾಳಾಪುರ ನಿವಾಸಿ ತೌಸೀಫ ಸಾಧಿಕ ನಿಪ್ಪಾಣಿ, ಧಾರವಾಡ ಮೆಣಸಿನಕಾಯಿ ಓಣಿ ಮದಾರಮಡ್ಡಿಯ ವಿದ್ಯಾರ್ಥಿ ಅತಿಯಾಬಖಾನ ಅಮಾನುಲ್ಲಾಖಾನ ತಡಕೋಡ, ಇಸ್ಲಾಂಪೂರ ರಸ್ತೆ ಹಳೇಹುಬ್ಬಳ್ಳಿ ನಿವಾಸಿ ವಿದ್ಯಾರ್ಥಿ ಅಮೀರ ಮಹಮ್ಮದಶಫಿ ತಮಟಗಾರ ಹಾಗೂ ಲಾರಿ ವ್ಯವಹಾರ ಮಾಡುತ್ತಿರುವ ಧಾರವಾಡದ ಬಡಿಗೇರ ಓಣಿ ಮದಿಹಾಳ ನಿವಾಸಿ ಮೋಹಿನ್ ದಾದಾಸಾಬ ಪಟೇಲ ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಮಹೀಂದ್ರಾ ಕಂಪನಿಯ ಝೈಲೋ ಕಾರು, ರಾಯಲ್ ಎನ್ ಫೀಲ್ಡ್, ಎರಡು ಡಿಯೋ ದ್ವಿಚಕ್ರ ವಾಹನ, ಹಿರೋ ಹೊಂಡಾ ಬೈಕ್, ಮೂರು ಪಿಸ್ತೂಲುಗಳು, 7ಜೀವಂತ ಗುಂಡುಗಳು ಮತ್ತೂ ನಾಲ್ಕು ಮೊಬೈಲ್ ಗಳನ್ನ ವಶಕ್ಕೆ ಪಡೆಯಲಾಗಿದೆ.
ಪ್ರಕರಣದಲ್ಲಿ ಇನ್ನೂ ಅನೇಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನ ಹುಡುಕುವ ಪ್ರಯತ್ನವನ್ನ ಪೊಲೀಸರು ಮಾಡುತ್ತಿದ್ದಾರೆ.