ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ-ತಾತ್ಕಾಲಿಕ ಮುಂದೂಡಿ: ಎಂಎಲ್ಸಿ ಸಂಕನೂರ ಆಗ್ರಹ..!
1 min readಧಾರವಾಡ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಆಹಾರ ದಾನ್ಯ ವಿತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ ಒತ್ತಾಯಿಸಿದ್ದಾರೆ.
ರಾಜ್ಯ ಸರಕಾರ ಕೋರೊನಾ ಎರಡನೇ ಅಲೆಯು ಅತ್ಯಂತ ವ್ಯಾಪಪಕವಾಗಿ ನಿಯಂತ್ರಣ ಮೀರಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದಿನಾಂಕ ಮೇ-10 ರಿಂದ ಮೇ-24 ರವರೆಗೆ ಲಾಕ್‌ಡೌನ ಗೋಷಣೆ ಮಾಡಿರುವುದು.ಈ ಕಾರಣಕ್ಕಾಗಿ ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ದಾನ್ಯ ವಿತರಣೆ ಮಾಡುವ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲು ಧಾರವಾಡ ಜಿಲ್ಲಾ ಪಂಚವಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರು ಪತ್ರ ಬರೆದು ಒತ್ತಾಯಿಸಿದ್ದಾರೆ.
ಡಿಸೆಂಬರ, ಜನೆವರಿ, ಫೆಬ್ರವರಿ, ಮಾರ್ಚ ಈ ನಾಲ್ಕು ತಿಂಗಳ ಆಹಾರ ಧಾನ್ಯವನ್ನು ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿರುತ್ತಾರೆ. ಆದರೆ ಲಾಕ್‌ಡೌನ್ ಇರುವುದರಿಂದ ಕೆ.ಎಸ್.ಆರ್.ಟಿ.ಸಿ ಬಸ್ಸ್, ರೀಕ್ಷಾ, ಇತರೆ ವಾಹನ ಸಂಚಾರ ನಿರ್ಬಂಧಿಸಲಾಗಿರವುದAರಿAದ ಶಿಕ್ಷಕರು ಮನೆಯಿಂದ ಹೋರಬಂದು ತಮ್ಮ ಶಾಲೆಗಳಿಗೆ ಹೋಗಿ ಆಹಾರ ಧಾನ್ಯ ವಿತರಿಸುವುದು ತೊಂದರೆಯಾಗುತ್ತಿದೆ ಹಾಗೂ ಹಾಗೂ ಸರಕಾರದ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ. ಮಕ್ಕಳು / ಪಾಲಕರು ಶಾಲೆಗೆ ಬಂದು ಆಹಾರ ಪಡೆದುಕೊಳ್ಳುವಾಗ ಜನಸಂದಣಿಯಾಗುವ ಸಂಭವವಿದೆ ಮತ್ತು ಇದು ಕೋವಿಡ್ ನಿಯಮ ನಿಯಮ ಉಲ್ಲಂಘನೆ ಮಾಡಿದಂತಾಗುತ್ತದೆ.
ಒಂದು ವೇಳೆ ಆಹಾರ ಧಾನ್ಯ ವಿತರಿಸುವುದು ಅನಿವಾರ್ಯವಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ ಸೂಚಿಸಿದ್ದಾರೆ.