ದೇಶದ್ರೋಹಿಗಳಿಗೆ ಜಾಮೀನು: ತೀರ್ಪು ಮಾರ್ಚ್ 9ಕ್ಕೆ: ಕಾಯ್ದಿರಿಸಿದ ನ್ಯಾಯಾಲಯ
1 min readಹುಬ್ಬಳ್ಳಿ: ಪಾಕ್ ಪರ ಘೋಷಣೆ ಕೂಗಿದ ಕೆಎಲ್ ಇ ಇಂಜಿನಿಯರಿಂಗ್ ಕಾಲೇಜಿನ ದೇಶದ್ರೋಹಿ ವಿದ್ಯಾರ್ಥಿಗಳ ಜಾಮೀನು ಅರ್ಜಿಯ ವಾದ-ವಿವಾದ ಮುಗಿದಿದ್ದು ತೀರ್ಪನ್ನ ಮಾರ್ಚ 9ಕ್ಕೆ ಕಾಯ್ದಿರಿಸಲಾಗಿದೆ.
ಹುಬ್ಬಳ್ಳಿಯ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಆರೋಪಿಗಳ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲರು ಹಾಗೂ ಸರಕಾರಿ ವಕೀಲರ ನಡುವೆ ವಾದ-ವಿವಾದ ನಡೆಯಿತು. ಇದೇಲ್ಲವನ್ನೂ ಅವಲೋಕಿಸಿದ ನ್ಯಾಯಾಧೀಶರು, ತೀರ್ಪನ್ನ ಮಾರ್ಚ 9ಕ್ಕೆ ನೀಡಲಾಗುವುದೆಂದು ಆದೇಶ ನೀಡಿದರು.
ದೇಶದ್ರೋಹಿ ವಿದ್ಯಾರ್ಥಿಗಳ ಪಾಕ್ ಪರ ಘೋಷಣೆ ದೇಶಾಧ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಪೊಲೀಸ್ ಆಯುಕ್ತರ ಕೆಲವು ನಿರ್ಣಯಗಳು ಅನೇಕರ ಬೇಸರಕ್ಕೂ ಕಾರಣವಾಗಿದ್ದನ್ನ ಇಲ್ಲಿ ಸ್ಮರಿಸಬಹುದು.