ವಿದ್ಯಾರ್ಥಿ ಆ್ಯಸಿಡ್ ಕುಡಿದ ಹಾಸ್ಟೇಲ್‌ನ “ವಾರ್ಡನ್” ಕರ್ತವ್ಯವೇನು… ಬಯೋಮೆಟ್ರಿಕ್ ಮಾಯ… ರಸ್ತೆಯಲ್ಲೇ ಊಟ… Exclusive Videos…

ಧಾರವಾಡ: ಗಾಂಧಿನಗರದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿರುವ ವಸತಿ ನಿಲಯದಲ್ಲಿ ನೀರಿರುವ ಸ್ಥಳದಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಕುಡಿದ ಪ್ರಕರಣ ಸದ್ದು ಮಾಡಿರುವ ಬೆನ್ನಲ್ಲೇ ಈ ಹಾಸ್ಟೇಲ್‌ನ ಹಲವು ಪ್ರಮಾದಗಳು ಬೆಳಕಿಗೆ ಬಂದಿವೆ.
ಹೌದು… ಈ ಪ್ರಕರಣದ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಗೆ ನೋಟೀಸ್ ಕೊಟ್ಟೇವಿ ಅನ್ನೋದು ಬಿಟ್ರೇ ಬೇರೆನೂ ಇಲ್ಲವೇ ಇಲ್ಲ. ನಿಲಯ ಪಾಲಕರಾದವರು ಎಲ್ಲವನ್ನೂ ಪರಿಶೀಲನೆ ಮಾಡಬೇಕು. ಅವರು ಅಲ್ಲಿಯೇ ಇರಬೇಕೆಂಬ ನಿಯಮವಿದೆ.
ಈ ಹಾಸ್ಟೇಲ್ ವಾರ್ಡನ್ ಅವರಿಗೆ ಎರಡು ಹಾಸ್ಟೇಲ್ ನೀಡಲಾಗಿದೆ. ಅದಕ್ಕೆ ನಿಜವಾದ ಕಾರಣ ಏನು ಎಂಬ ಬಗ್ಗೆಯೂ ಹಲವು ಊಹಾಪೋಹಗಳಿವೆ. ಆ್ಯಸಿಡ್ ಕುಡಿದ ಹಾಸ್ಟೇಲ್‌ನಲ್ಲಿ ಊಟ ಮಾಡಲು ಜಾಗವಿಲ್ಲದೇ ವಿದ್ಯಾರ್ಥಿಗಳು ರಸ್ತೆಯಲ್ಲಿ ಕೂತು ಊಟ ಮಾಡುವ ಸ್ಥಿತಿಯಿದೆ. ಈ ಕುರಿತು ವೀಡಿಯೋ ಮಾಹಿತಿ ಇಲ್ಲಿದೆ ನೋಡಿ.
ವಿದ್ಯಾರ್ಥಿ ಆ್ಯಸಿಡ್ ಕುಡಿದ ಪ್ರಕರಣದಲ್ಲಿ ವಿದ್ಯಾರ್ಥಿಯದ್ದೆ ತಪ್ಪು ಎಂದು ಮಾತಾಡಿಕೊಳ್ಳುವ ಮಖೇಡಿಗಳಿಗೇನು ಕಮ್ಮಿಯಿಲ್ಲ. ಆ್ಯಸಿಡ್ ತಂದು ಕುಡಿಯುವ ನೀರಿನ ಜಾಗದಲ್ಲಿಡಲು ಸಿಬ್ಬಂದಿ ಹಾಗೂ ವಾರ್ಡನ್ ನಿರ್ಲಕ್ಷ್ಯವಲ್ಲದೇ ಮತ್ತೇನು.
ಬಡವರ ಮತ್ತು ಕೆಳವರ್ಗದ ವಿದ್ಯಾರ್ಥಿಗಳಿಗೆ ತೊಂದರೆಯಾದರೇ, ಅದನ್ನ ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಮತ್ತೂ ಬೇಕಾಬಿಟ್ಟಿಯಾಗಿ ಮಾತನಾಡುವುದು ನಡೆಯುತ್ತಲೆ ಇರತ್ತೆ. ಇದು ಕುಬೇರ ಲಮಾಣಿಯ ವಿಷಯದಲ್ಲಿ ನಡೆಯದಿರಲಿ.
ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್‌ಗಳಿಗೆ ಎರಡೆರಡು ಹಾಸ್ಟೇಲ್‌ಗಳ ಇನ್‌ಚಾರ್ಜ ಕೊಡುವ ಅವಶ್ಯಕತೆಯ ಹಿಂದಿನ ಉದ್ದೇಶ ಏನಿರತ್ತೆ ಎಂಬುದು ರಹಸ್ಯವೇನಲ್ಲ. ವಿದ್ಯಾರ್ಥಿಗಳ ಸಂಖ್ಯೆ ಗುರುತಿಸಲು ಹಾಕುವ ಬಯೋಮೆಟ್ರಿಕ್ “ಗಾಂಧಿನಗರ” ಹಾಸ್ಟೇಲ್ ಮತ್ತು ಇವರೇ ಇನ್‌ಚಾರ್ಜ್ ಇರುವ ಮತ್ತೊಂದು ಹಾಸ್ಟೇಲ್‌ನಲ್ಲಿ ಏಕಿಲ್ಲ ಎಂಬುದನ್ನ ಸಂಬಂಧಿಸಿದ ಅಧಿಕಾರಿಗಳು ತನಿಖೆ ಮಾಡಬೇಕಿದೆ.
ಬಯೋಮೆಟ್ರಿಕ್ ಇದ್ದರೇ ಎಷ್ಟು ವಿದ್ಯಾರ್ಥಿಗಳು ಊಟ ಮಾಡಿದರೂ ಎಂಬುದು ಗೊತ್ತಾಗತ್ತೆ. ಅದನ್ನ ಮರೆಮಾಚಲು ಯಾವ ಷಢ್ಯಂತ್ರ ಹೆಣೆಯಲಾಗಿದೆ ಎಂಬುದು ಆತ್ಮಸಾಕ್ಷಿಯಿದ್ದವರಿಗೆ ಅರ್ಥವಾಗತ್ತೆ.
ವಾರ್ಡನ್ ಎಷ್ಟು ದಿನ ಈ ಎರಡು ಹಾಸ್ಟೇಲ್‌ನಲ್ಲಿ ಇರ್ತಾರೆ, ಬಾಗಲಕೋಟೆಯಲ್ಲಿ ಎಷ್ಟು ದಿನ ಹೋಗುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೂ, ನಡೆಯುತ್ತಿದೆ ಸರಕಾರದ ಕೆಲಸ ದೇವರ ಕೆಲಸವೆಂಬ ಜಾತ್ರೆ…