Posts Slider

Karnataka Voice

Latest Kannada News

“ಬೆಂದು ಜೀವ ಬಿಟ್ಟ” ಮಗಳ ನೆನಪಿಗಾಗಿ ನೂರಾರೂ ವಿದ್ಯಾರ್ಥಿಗಳಿಗೆ ದಾರಿದೀಪವಾದ ASI…

1 min read
Spread the love

ನೂರಾರು ಬಡ ಮಕ್ಕಳ ವಿದ್ಯಾಬ್ಯಾಸಕ್ಕೆ ಬೆಳಕಾದ ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಲೊಕೇಶಪ್ಪ

ಬೆಂಗಳೂರು: ಶಿವಾಜಿನಗರ ಮಹಿಳಾ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸಪೆಕ್ಟರ್ ಲೊಕೇಶಪ್ಪ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪ‌ವಾಗಿದ್ದಾರೆ.

ಬೆಂಕಿ ದುರಂತದಲ್ಲಿ ಮಗಳ ಕಳೆದುಕೊಂಡ ASIನಿಂದ ಬಡಮಕ್ಕಳಿಗೆ ಅಗತ್ಯ ಸಹಾಯವನ್ನ ಬಡ ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನು ಒದಗಿಸುವ ಮೂಲಕ ಮಾಡುತ್ತಿದ್ದಾರೆ. ಆರಂಭದಲ್ಲಿ ಒಂದು ಶಾಲೆಯಿಂದ ಶುರು ಈಗ 6 ಶಾಲಾ ಮಕ್ಕಳು.. ಸುಮಾರು 600 ಬಡ ಮಕ್ಕಳಿಗೆ ಶಾಲಾ ಸಾಮಾಗ್ರಿಗಳ ಒದಗಿಸುತ್ತಿರುವ ASI.. ತನ್ನ ಎರಡು ತಿಂಗಳ ಸಂಬಳವನನ್ನು ಬಡಮಕ್ಕಳ ವಿಧ್ಯಾಭ್ಯಾಸದ ಅಗತ್ಯಕ್ಕೆ ಮುಡಿಪು..

2019 ರಲ್ಲಿ ತನ್ನ ಮಗಳನ್ನು ಕಳೆದುಕೊಂಡಿದ್ದ ಲೊಕೇಶಪ್ಪ.. ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿ ಕರ್ತವ್ಯದ ವೇಳೆ ಮಗಳ ಸಾವು.. ಬೆಂಕಿ ಅವಘಡದಲ್ಲಿ ತನ್ನ ಮಗಳು ಹರ್ಷಾಲಿಯನ್ನು ಕಳೆದುಕೊಂಡಿದ್ದರು.

ಮಗಳ ಸಾವಿನ ಬಳಿಕ ಹಿರಿಯ ಸಿಬ್ಬಂದಿಯಿಂದ ನಿರ್ಧಾರ ಮಾಡಿದ್ದು, ತನ್ನ ಮಗಳ ನೆನಪಿನಲ್ಲಿ ಬಡಮಕ್ಕಳಿಗೆ ಸಹಾಯ ಮಾಡುತ್ತಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಎಎಸ್ಐ ದಿಟ್ಟ ಹೆಜ್ಜೆಯಿಟ್ಟು  ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣ ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ನೀಡಲು ನಿರ್ಧರಿಸಿದ್ದಾರೆ. ಕಳೆದ ಒಂದು ವರ್ಷದಿಂದ ಆರು ಶಾಲೆಗಳ ಬಡ ಮಕ್ಕಳಿಗೆ ಶಾಲಾ ಸಾಮಗ್ರಿಗಳಿಗೆ ಧನಸಹಾಯ ನೀಡುತ್ತಿದ್ದಾರೆ.

ಬೆಂಗಳೂರಿನ ಒಂದು ಶಾಲೆ, ಮೈಸೂರಿನ ಒಂದು ಹಾಗೂ ಹಾಸನದ ನಾಲ್ಕು ಶಾಲೆಯ ಬಡಮಕ್ಕಳಿಗೆ ನೆರವು.. 1 ರಿಂದ 8ನೇ ತರಗತಿಯ 6೦೦ ಮಕ್ಕಳಿಗೆ ಸಾಮಾಗ್ರಿಗಳ ನೆರವು..
ಬೆಂಗಳೂರಿನ 2೦೦ ಮಕ್ಕಳು ಸೇರಿದಂತೆ 6೦೦ ಮಕ್ಕಳಿಗೆ ಶಾಲಾ ಸಾಮಾಗ್ರಿಗಳ ಸಹಾಯ.. ಲೊಕೇಶಪ್ಪ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ನಂತರ ತನ್ನ ಮಗಳ ಹೆಸರಿನಲ್ಲಿ NGO ಸ್ಥಾಪನೆ ಮಾಡಿದ್ದು  ಸದ್ಯ ASI ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗುತ್ತಿದೆ.


Spread the love

Leave a Reply

Your email address will not be published. Required fields are marked *