ಇದ್ದೋಬ್ಬ ಮಗ ಕೃಷಿ ಹೊಂಡದ ಪಾಲು: ರಾಜಣ್ಣ ಕೊರವಿಯವರ ಹೊಲದಲ್ಲಿ ದುರ್ಘಟನೆ…!
1 min readಧಾರವಾಡ: ಕೊರೋನಾ ಸಾಂಕ್ರಾಮಿಕ ರೋಗದಿಂದ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಅಂಕೆಯಿಲ್ಲದಂತಾಗಿದ್ದು, ಗೆಳೆಯರೊಂದಿಗೆ ಹೋಗಿದ್ದ ವಿದ್ಯಾರ್ಥಿಯೋರ್ವ ಕೃಷಿ ಹೊಂಡದ ಮಣ್ಣಿನಲ್ಲಿ ಸಿಲುಕಿ ಸಾವಿಗೀಡಾದ ಘಟನೆ ಸೋಮಾಪುರ ಗ್ರಾಮದ ಸಮೀಪದಲ್ಲಿನ ಮಾರಡಗಿ ಕ್ರಾಸ್ ಹತ್ತಿರ ಸಂಭವಿಸಿದೆ.
ತಾಯಿಯ ಊರಾದ ಸೋಮಾಪುರದ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಬಸವರಾಜ ಗದಿಗೆಪ್ಪ ಲಕ್ಕಣ್ಣನವರ ಎಂಬಾತನೇ ಸಾವಿಗೀಡಾದ ದುರ್ಧೈವಿಯಾಗಿದ್ದಾನೆ. ಮೂಲತಃ ಶಿವಳ್ಳಿ ಗ್ರಾಮದ ಗದಿಗೆಪ್ಪ, ತನ್ನ ಮಡದಿ ಗ್ರಾಮದಲ್ಲಿ ತಂಗಿದ್ದಾರೆ.
ಅಂಬ್ಲಿಕೊಪ್ಪ ಗ್ರಾಮದಲ್ಲಿ ಕೆಲಸ ಮಾಡಿಕೊಂಡಿದ್ದ ಕುಟುಂಬ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮರಳಿತ್ತು. ಮೃತ ಬಸವರಾಜ, ಗದಿಗೆಪ್ಪನಿಗೆ ಓರ್ವನೇ ಮಗನಾಗಿದ್ದ. ಘಟನೆಯಿಂದ ಕೃಷಿ ಹೊಂಡದ ಹತ್ತಿರ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.
ಹೆಬ್ಬಳ್ಳಿಯ ರಮೇಶ ಹಡಪದ ಎನ್ನುವವರಿಗೆ ಸೇರಿದ ಜಮೀನನ್ನ ರಾಜಣ್ಣ ಕೊರವಿಯವರು ಮಾಡುತ್ತಿದ್ದರೆಂದು ಹೇಳಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿದ್ದು, ಶವವನ್ನ ಸ್ಥಳಾಂತರ ಮಾಡುತ್ತಿದ್ದಾರೆ.