ಪಾಕ್ ಪರವಾಗಿ ಘೋಷಣೆ ಕೂಗಿದ್ದವರಿಂದು ಹುಬ್ಬಳ್ಳಿ ಕೋರ್ಟಿಗೆ ಹಾಜರಾಗಿದ್ದರು..!
1 min readಹುಬ್ಬಳ್ಳಿ: ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಮೂವರು ವಿದ್ಯಾರ್ಥಿಗಳು ಇಂದು ಹುಬ್ಬಳ್ಳಿಯ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಭಾರಿ ಭದ್ರತೆಯಲ್ಲಿ ಹಾಜರಾಗಿದ್ದರು.
ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಕೋರ್ಟ್ ಸಮನ್ಸ್ ನೀಡಿದ್ದರಿಂದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ಮುಂದಿನ ವಿಚಾರಣೆಯನ್ನ ಮಾರ್ಚ 10ಕ್ಕೆ ಮುಂದೂಡಲಾಗಿದೆ.
ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳಾದ ಆಮೀರ್ ಮೊಹಿದ್ದೀನ್ ವಾಣಿ, ಬಸೀರ್ ಆಸೀಫ್ ಸೋಪಿ ಮತ್ತು ತಾಲೀಬ್ ಮಜೀದ ಎಂಬುವವರು ಪಾಕ್ ಪರವಾಗಿ ಘೋಷಣೆ ಕೂಗಿದ ವೀಡಿಯೋಯೊಂದು ವೈರಲ್ ಆಗಿದ್ದರಿಂದ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಇದೇ ಪ್ರಕರಣದಲ್ಲಿ ಜಾರ್ಜಸೀಟ್ ನೀಡುವಲ್ಲಿ ವಿಳಂಬ ಮಾಡಿದ್ದರಿಂದ ಆರೋಪಿತರಿಗೆ ಜಾಮೀನು ಸಿಗುವಂತಾದ ಪರಿಣಾಮ, ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಡಿಸೋಜಾ ಅವರನ್ನ ಅಮಾನತ್ತು ಮಾಡಲಾಗಿತ್ತು.
ಕಾಶ್ಮೀರ ಮೂಲದ ವಿದ್ಯಾರ್ಥಿಗಳನ್ನ ಇಲ್ಲಿಂದ ಹೋಗುವಂತೆ ಮಾಡಬೇಕೆಂದು ಅವಳಿನಗರವೂ ಸೇರಿದಂತೆ ರಾಜ್ಯದಲ್ಲಿ ಪ್ರತಿಭಟನೆ ನಡೆದಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.