ಪದವಿ ಕಾಲೇಜು ಆರಂಭ- 2ದಿನಕ್ಕೆ 70 ವಿದ್ಯಾರ್ಥಿ, ಸಿಬ್ಬಂದಿಗೆ ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾವಳಿ ಕಡಿಮೆಯಾಗಿದೆ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದುಕೊಂಡು ಆರಂಭಿಸಿದ್ದ ಪದವಿ ಕಾಲೇಜುಗಳಲ್ಲಿ ಆತಂಕ ಮೂಡಿಸುವ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಶಿಕ್ಷಣ ಇಲಾಖೆ ಮತ್ತಷ್ಟು ಕಳವಳವನ್ನುಂಟು ಮಾಡಿದೆ.
ನವೆಂಬರ್ 17ರಿಂದ ಪದವಿ ಕಾಲೇಜುಗಳನ್ನ ಆರಂಭಿಸಿದ ಮರುದಿನವೇ ನೂರಾರು ಸಿಬ್ಬಂದಿಗಳನ್ನ ಹಾಗೂ ವಿದ್ಯಾರ್ಥಿಗಳನ್ನ ತಪಾಸಣೆ ಮಾಡಲಾಗಿದ್ದು, ಸುಮಾರು 70 ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳಿಗೆ ಕೊರೋನಾ ದೃಢಪಟ್ಟಿದೆ.
ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳು ಕಳೆದ 8 ತಿಂಗಳಿಂದ ಆರಂಭವಾಗಿರಲಿಲ್ಲ. ಆದರೆ, ಕೆಲವು ರಾಜ್ಯಗಳಲ್ಲಿ ಪದವಿ ಕಾಲೇಜುಗಳನ್ನ ಆರಂಭ ಮಾಡಿದ್ದರು. ಅದನ್ನೇಲ್ಲ ಗಮನಿಸಿಯೇ ರಾಜ್ಯದಲ್ಲಿಯೂ ಪದವಿ ಕಾಲೇಜುಗಳನ್ನ ಆರಂಭ ಮಾಡಲು ನಿರ್ಧರಿಸಲಾಗಿತ್ತು.
ಆದರೆ, ಬೆಂಗಳೂರಲ್ಲಿಯೇ ಇಷ್ಟೊಂದು ಪ್ರಮಾಣದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಹಲವು ರೀತಿಯ ಆತಂಕ ಸೃಷ್ಟಿಯಾಗಿವೆ. ಶಿಕ್ಷಣ ಇಲಾಖೆ ಮತ್ತೆ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನ ಕಾದು ನೋಡಬೇಕಿದೆ.