Posts Slider

Karnataka Voice

Latest Kannada News

ಸರಕಾರಿ ಶಾಲೆಯ “ಹಳ್ಳಿ ಹುಡುಗಿಗೆ ದಿಲ್ಲಿ ಕಿರೀಟ”- ಕಲಿಸಿದ ಗುರು ಎಂ.ಕೆ.ಮುನವಳ್ಳಿ ಹರ್ಷ…!

1 min read
Spread the love

ಧಾರವಾಡ: ಸರಕಾರಿ ಶಾಲೆಯಂದರೇ ಮೂಗು ಮುರಿಯುವವರ ನಡುವೆ ಅದೇ ಸರಕಾರಿ ಶಾಲೆಯಲ್ಲಿ ಕಲಿತು ದೇಶದಲ್ಲಿ ಕೀರ್ತಿ ಪತಾಕೆ ಹಾರಿಸಿ, ತನ್ನೂರಿಗೆ ಮರಳಿರುವ ವಿದ್ಯಾರ್ಥಿನಿಗೆ ಆಕೆಯ ಗುರುಗಳಾದ ಕೆ.ಎಂ. ಮುನವಳ್ಳಿ ಅಭಿನಂದನೆ ಸಲ್ಲಿಸಿದ್ದಾರೆ.

ಅಥ್ಲೇಟಿಕ್ಸ್ ನಲ್ಲಿ ದೇಶದಲ್ಲಿ ಬೆಳ್ಳಿ ಪದಕ ಪಡೆದಿರುವ ಕೀರ್ತಿಗೆ  ಧಾರವಾಡ ತಾಲೂಕಿನ ಮುಗಳಿ ಗ್ರಾಮದ ಪ್ರಿಯಾಂಕ ಮಡಿವಾಳಪ್ಪ ಓಲೇಕಾರ ಭಾಜನರಾಗಿದ್ದಾರೆ.

ಇವಳು 2019 ರಲ್ಲಿ ನ್ಯಾಶನಲ್ ಇಂಟರ್ ಡಿಸ್ಟ್ರಿಕ್ಟ್‌ ಜೂನಿಯರ್ ಅಥ್ಲೆಟಿಕ್ ತಿರುಪತಿಯಲ್ಲಿ 600 ಮೀಟರ್ ಓಟದಲ್ಲಿ ಪ್ರಥಮ ಬಹುಮಾನ ಗಳಿಸಿದ್ದಳು. ಆಂದ್ರ ದಲ್ಲಿ ಜರುಗಿದ 600 ಮೀಟರ್ ನ್ಯಾಶನಲ್ ಜುನೀಯರ್ ಪಂದ್ಯದಲ್ಲಿ ತೃತೀಯ ಸ್ಥಾನ. ಉಡುಪಿಯಲ್ಲಿ ಜರುಗಿದ  ಸೌಥ್ ಜೋನ್ ನ್ಯಾಶನಲ್ ಚಾಂಪಿಯನ್ ಓಟದಲ್ಲಿ ಪ್ರಥಮ ಸ್ಥಾನವನ್ನ ಪಡೆದಿದ್ದಳು.

2020 ರಲ್ಲಿ ಬೆಂಗಳೂರಿನಲ್ಲಿ ಜರುಗಿದ‌ 400, 600,  ಮಿನಿ ನ್ಯಾಶನಲ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಪ್ರಥಮ ಸ್ಥಾನ. ಅಸ್ಸಾಂನಲ್ಲಿ 36th ಜೂನಿಯರ್ ಅಥ್ಲೆಟಿಕ್ 2021 ರಲ್ಲಿ 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಳು. 3 RD ನ್ಯಾಶನಲ್ ಓಪನ್ ಚಾಂಪಿಯನ್ ಶಿಪ್  400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಳು, 5th ನ್ಯಾಶನಲ್ ಕ್ರಾಸ್‌ ಕಂಟ್ರಿ ಚಾಂಪಿಯನ್ ಶಿಪ್ ಚಂಡಿಗಡದಲ್ಲಿ ಪಂದ್ಯದಲ್ಲಿ 200 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಗಳಿಸಿದ್ದಳು.

ಸದ್ಯ10 ನೆಯ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಸರ್ಕಾರಿ ಶಾಲೆಯಲ್ಲಿ ಕಲಿತು, ಹಳ್ಳಿಗಾಡಿನ ಪ್ರತಿಭೆ  ಊರಿನ ಹಾಗೂ ತಾಲೂಕಿಗೆ ಹೆಮ್ಮೆ ತಂದಿದ್ದಾರೆ ಎಂದು ಸಮೀಪದ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತ ಮಠದ ಸದ್ಗುರು ಶ್ರೀ ಗುರು ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು, ಹರ್ಷ ವ್ಯಕ್ತಪಡಿಸಿದರು. ಈಕೆಯ ಭವಿಷ್ಯ ಉಜ್ವಲವಾಗಲಿ, ನಾಡಿನ ಹಾಗೂ ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಲಿ ಎಂದು ಶ್ರೀಗಳು ಆಶಿಸಿದರು.

ಈ ಸಾಧನೆಯನ್ನು ಮುಕ್ತಕಂಠದಿಂದ ಕೊಂಡಾಡಿದ, ಧಾರವಾಡದ ಪ್ರತಿಷ್ಠಿತ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾಧ್ಯಕ್ಷ ಭೀಮಪ್ಪ ಕಾಸಾಯಿ, ಅದ್ಯಕ್ಷ ಎಲ್. ಐ. ಲಕ್ಕಮ್ಮನವರ, ಕಾರ್ಯಾದ್ಯಕ್ಷ ಅಕ್ಬರಲಿ ಸೋಲಾಪುರ, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಕೋಶಾದ್ಯಕ್ಷ  ಅಜಿತಸಿಂಗ ರಜಪೂತ, ಸಂಸ್ಥೆಯ ಮಹಾಪೋಷಕ ಗುರುಪುತ್ರಪ್ಪ ಶಿರೋಳ, ವಿದ್ಯಾ ನಾಡಿಗೇರ, ಡಾ.ರೇಣುಕಾ ಅಮಲಜರಿ, ವಿ.ಎನ್. ಕೀರ್ತಿವತಿ, ವೈ.ಬಿ.ಕಡಕೋಳ, ಆರ್. ನಾರಾಯಣಸ್ವಾಮಿ ಚಿಂತಾಮಣಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಸಂಚಾಲಕರುಗಳು ಹಾಗೂ ಸರ್ವಸದಸ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed