ಸಾವಿನಲ್ಲೂ ಸಾರ್ಥಕತೆ ಮರೆದ ವಿದ್ಯಾರ್ಥಿ: ಒಂಬತ್ತು ಜನರಿಗೆ ಜೀವದಾನ…!

ಮಳವಳ್ಳಿ: ತನ್ನ ಸಾವಿನಲ್ಲೂ ವಿದ್ಯಾರ್ಥಿಯೋರ್ವ ಸಾರ್ಥಕತೆ ಮೆರೆದಿದ್ದು, ಒಂಬತ್ತು ಜನರಿಗೆ ಜೀವದಾನ ಮಾಡಿರುವ ಘಟನೆಯೊಂದು ನಡೆದಿದ್ದು, ಚಿತ್ರನಟ ಪುನೀತ ರಾಜಕುಮಾರರನ್ನ ಸ್ಮರಿಸುವಂತೆ ಮಾಡಿದೆ.

ಡಿಸೆಂಬರ್ 23ನೇ ತಾರೀಕು ಮಳವಳ್ಳಿಯ ಶಾಂತಿ ಕಾಲೇಜಿನ ವಿದ್ಯಾರ್ಥಿಗಳಾದ ಶರತ್, ಶಶಾಂಕ್ ಹಾಗೂ ಸುದರ್ಶನ್ ಅವರು ಕಾಲೇಜು ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಕಾರೊಂದು ಮೂವರಿಗೆ ಡಿಕ್ಕಿ ಹೊಡೆದಿತ್ತು.
ಈ ಪೈಕಿ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯಾದಿಂದ ಪಾರಾಗಿದ್ದರು. ಆದರೆ, ಶರತ್ ಅವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್ ಶರತ್ ಅವರು ದಿನಾಂಕ 26 ಡಿಸೆಂಬರ್ ಭಾನುವಾರದಂದು ಬ್ರೈನ್ ಡೆಡ್ ಆದ ಕಾರಣ ಚಿಕಿತ್ಸೆ ಫಲಕಾರಿ ಆಗದೆ ಅಸುನೀಗಿದ್ದಾರೆ.
ಕುಟುಂಬದವರು ಶರತ್ ಅವರ ಅಂಗಾಂಗ ದಾನ ಮಾಡಿದ್ದು, ಈಗ ಶರತ್ ಒಂಬತ್ತು ಮಂದಿಗೆ ಜೀವವಾಗಿದ್ದಾರೆ. ಈ ಮೂಲಕ ಶರತನನ್ನ ಕಾಣುವುದಕ್ಕೆ ಮುಂದಾದ ಕುಟುಂಬದವರ ನಿರ್ಧಾರ ಮೆಚ್ಚುವಂತಾಗಿದೆ.