ವಿವಿ ನೇಮಕಾತಿಯಲ್ಲೂ ಅನ್ಯಾಯ- ಕವಿವಿಯಲ್ಲಿ ಬೃಹತ್ ಪ್ರತಿಭಟನೆ

ಕವಿವಿ: ಧಾರವಾಡದ ಪ್ರತಿಷ್ಟಿತ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ, ರಾಜ್ಯದ ವಿವಿಗಳಿಗೆ ಭೋದಕ ಹಾಗೂ ಭೋದಕೇತರ ಸಿಬ್ಬಂಧಿಗಳ ನೇಮಕಾತಿ ವಿಚಾರದಲ್ಲಿ ಇದುವರೆಗೆ ಇದ್ದ ನೇರ ನೇಮಕಾತಿಯನ್ನು ಬದಲಾಯಿಸಿ ರಾಜ್ಯ ಸರ್ಕಾರವು ಕೆ.ಇ.ಎ. ಮೂಲಕ ಕೇಂದ್ರಿಕೃತ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೊರಟಿರುವುದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕ ವಿಶ್ವವಿದ್ಯಾಲಯ ಸಂಶೋಧನಾ ವಿದ್ಯಾರ್ಥಿಗಳ ಸಂಘ ಕರ್ನಾಟಕ ವಿಶ್ವವಿದ್ಯಾಲಯ ಶಿಕ್ಷಕೆತರ ನೌಕರರ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಸಹಾಯಕ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಒಕ್ಕೂಟ, ಕರ್ನಾಟಕ ವಿಶ್ವವಿದ್ಯಾಲಯ ಗುತ್ತಿಗೆ ಆದಾರಿತ ಸೇವಾನಿರತ ನೌಕರರ ಸಂಘ, ಕರ್ನಾಟಕ ವಿಶ್ವವಿದ್ಯಾಲಯ ಎಸ್ಸಿ,ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟಗಳ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.
ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಂಜು ಹೊಂಗಲದ, ಕಾರ್ಯಾಧ್ಯಕ್ಷ ಅಮಿತ್ ಶಿಂಧೆ, ಉಪಾದ್ಯಕ್ಷ ಮಲ್ಲೇಶ ಚನ್ನಬತ್ತಿ , ದುಂಡಪ್ಪ, ಮಾಧವಿ ನಂದಿಮಠ, ವಿಶ್ವನಾಥ ಮಾನೆ, ಸೇರಿದಂತೆ ಸುಭಾಷಚಂದ್ರ ನಾಟೇಕರ, ಸಂಗೀತಾ ಮಾನೆ, ಶರೀಫ್, ಡಾ. ವಿಶ್ವನಾಥ ಚಿಂತಾಮಣಿ, ರಾಜು ದಾದುಗೌಡರ, ದುಷ್ಯಂತ ಓಲೇಕಾರ, ಅನಿಲ ರಜಪೂತ, ನೇಹಾ ನಾಯಕ್, ಕೋಮಲ್ ಉಳ್ಳಾಗಡ್ಡಿ, ಶಿವಪ್ರಸಾದ ಚಲವಾದಿ, ಸತೀಶ್, ಇನ್ನಿತರರು ಸೇರಿ ವಿವಿಯ ಕುಲಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.