ಪಾತ್ರೆ-ಚೈನು ಒತ್ತೆಯಿಟ್ಟು ಮದ್ಯ ಸೇವನೆ: ಬೀದಿಗಿಳಿದ ಮಹಿಳೆಯರು

ಕೋಲಾರ: ಮದ್ಯ ಮಾರಾಟ ಆರಂಭಿಸಿದ್ದಕ್ಕೆ ಮಹಿಳೆಯರ ಆಕ್ರೋಶಗೊಂಡಿದ್ದು, ಮಕ್ಕಳ ಕಾಲಿನ ಚೈನ್, ಪಾತ್ರೆ, ರೇಷನ್ ಅಡವಿಟ್ಟು ಮದ್ಯಸೇವನೆ ಮಾಡುತ್ತಿದ್ದಾರೆ. ಹೀಗಾಗಿ ಕುಡುಕ ಗಂಡಂದಿರ ಕಾಟಕ್ಕೆ ಬೇಸತ್ತ ಕೆಜಿಎಪ್ ಮಹಿಳೆಯರು, ಕೈ ಮುಗಿದು ಬೇಡಿಕೊಂಡು ಮದ್ಯ ನಿಷೇದಿಸಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕೆಜಿಎಪ್ ತಹಶಿಲ್ದಾರ್ ಕಚೇರಿ ಎದುರು ಮಹಿಳೆಯರು ಹೋರಾಟ ಆರಂಭಿಸಿದ್ದು, ಮದ್ಯ ಮಾರಾಟ ಆರಂಭಗೊಂಡ ಮೂರೇ ದಿನದಲ್ಲಿ ಮನೆಯಲ್ಲಿನ ಪಾತ್ರೆ-ಪಗಡೆಗಳು ಖಾಲಿಯಾಗುತ್ತಿವೆ. ದುಡಿಯಲು ಕೆಲಸವೂ ಇಲ್ಲ. ಮಾನಸಿಕವಾಗಿಯೂ ದೈಹಿಕವಾಗಿಯೂ ಹಿಂಸೆ ಕೊಡು್ತಿದ್ದಾರೆ ಎಂದು ದೂರಿರುವ ಮಹಿಳೆಯರು ಮಧ್ಯ ಮಾರಾಟ ಬಂದ್ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.