ಎಂಎಲ್ಸಿ ಚುನಾವಣೆ ಇದ್ದಿದ್ದಕ್ಕ್ ಬೀದಿ ಲೈಟ್ ಹಾಕುದಿಲ್ಲಂತ್: ಚೂರು ಹೇಳ್ರೀಪಾ ಇವರಿಗೆ..!
1 min readಹುಬ್ಬಳ್ಳಿ: ಇದು ವಾಣಿಜ್ಯನಗರಿಯಲ್ಲಿರೋ ಸಾರ್ವಜನಿಕರನ್ನ ಇಲಾಖೆಗಳು ಯಾವ ಥರಾ ನೋಡಿಕೊಳ್ಳುತ್ತಿವೆ ಎನ್ನುವುದಕ್ಕೆ ಉದಾಹರಣೆ ಸಮೇತ ನಿಮಗೆ ತೋರಿಸುತ್ತೇವೆ ನೋಡಿ..
ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಕ್ಷೇತ್ರದಲ್ಲೇ ಜನರು ರಾತ್ರಿಯಾದ ತಕ್ಷಣ ಮನೆಯಿಂದ ಹೊರಗೆ ಬಾರದ ಸ್ಥಿತಿಗೆ ಬಂದಿದ್ದಾರೆ. ಬೀದಿ ದೀಪಗಳು ಇಲ್ಲದೇ ಇರುವುದೇ ಇದಕ್ಕೆ ಮುಖ್ಯ ಕಾರಣ.
ಸುಳ್ಳ ರಸ್ತೆಯ ಬಸವೇಶ್ವರ ಪಾರ್ಕದಲ್ಲಿ ಬೀದಿ ದೀಪಗಳು ಹೋಗಿ ಹಲವು ದಿನಗಳೇ ಕಳೆದಿವೆ. ಸಂಬಂಧಿಸಿದ ಅಧಿಕಾರಿಗಳನ್ನ ಕೇಳಿದರೇ, ಈಗ ಚುನಾವಣೆ ನೀತಿ ಸಂಹಿತೆಯಿದೆ. ಹಾಗಾಗಿ ಲೈಟ್ ಗಳನ್ನ ಹಾಕಲು ಆಗುವುದಿಲ್ಲವೆಂದು ಖಡಾಖಂಡಿತವಾಗಿ ಹೇಳತೊಡಗಿದ್ದಾರೆ.
ಎತ್ತಿಗೆ ಜ್ವರ ಬಂದ್ರೇ ಎಮ್ಮೆಗೆ ಬರೆ ಎಳೆದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ನೀತಿ ಸಂಹಿತೆ ಪ್ರಕಾರ ಬೀದಿ ದೀಪವನ್ನೂ ಹಾಕಬಾರದೆನ್ನುವುದು ಯಾವ ನ್ಯಾಯ. ಸಂಜೆಯಾದರೇ, ಸಾರ್ವಜನಿಕರು ಸಂಚರಿಸುವುದು ಹೇಗೆ ಎಂಬುದನ್ನ ಅಧಿಕಾರಿಗಳೇ ಹೇಳಬೇಕಿದೆ.
ಜಿಲ್ಲಾ ಉಸ್ತುವಾರಿ ಸಚಿವರೇ, ಬೀದಿ ದೀಪ ಹಾಕಲೂ ಕೂಡಾ ನೀವೇ ಹೇಳುವ ಸ್ಥಿತಿ ಬರುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಚುನಾವಣೆಗಳು ಬರ್ತವೆ ಹೋಗ್ತವೇ.. ಇಲ್ಲಿನ ಜನ ಮಾತ್ರ ನಿಮ್ಮದೇ ಕ್ಷೇತ್ರದಲ್ಲಿ ಇರ್ತಾರೆ. ನೋಡಿ.. ಅಧಿಕಾರಿಗಳಿಗೆ ಬುದ್ಧಿ ಹೇಳಿ ಬೀದಿ ದೀಪಗಳನ್ನ ಹಾಕಿಸಿ..