ವಿದ್ಯಾಗಮ ಕಾರ್ಯಕ್ರಮ ಸ್ಥಗಿತ: ಸಚಿವ ಸುರೇಶಕುಮಾರ
1 min readಬೆಂಗಳೂರು: ಕೊರೋನಾ ಪಾಸಿಟಿವ್ ಗೆ ಒಳಗಾಗಿರುವ ಸಚಿವ ಸುರೇಶಕುಮಾರ, ವಿದ್ಯಾಗಮ ಕಾರ್ಯಕ್ರಮವನ್ನ ತಾತ್ಕಾಲಿಕವಾಗಿ ಸ್ತಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ತಿಳಿಸಿದ್ದಾಗಿ ಬರೆದುಕೊಂಡಿದ್ದಾರೆ.
ವಿದ್ಯಾಗಮ ಯೋಜನೆಯಿಂದ ನೂರಾರೂ ಶಿಕ್ಷಕರು ಸಾವಿಗೀಡಾಗಿದ್ದಾರೆಂಬ ಮಾಹಿತಿ ಹೊರ ಬಂದ ನಂತರ ಹಲವು ರೀತಿಯಲ್ಲಿ ಪರ-ವಿರೋಧ ಕೇಳಿ ಬಂದಿದ್ದವು. ಇದನ್ನ ಮನಗಂಡಿರುವ ಸಚಿವ ಸುರೇಶಕುಮಾರ ಇಂತಹದೊಂದು ತೀರ್ಮಾನಕ್ಕೆ ಬಂದಿರುವುದು ಶಿಕ್ಷಕ ವಲಯದಲ್ಲಿ ಸಂತಸ ಮೂಡಿಸಿದೆ.
ವಿದ್ಯಾಗಮ ಯೋಜನೆ ತಾತ್ಕಾಲಿಕವಾಗಿ ಬಂದ್ ಆಗುವುದರಿಂದ ಶಿಕ್ಷಕರು ಏನು ಮಾಡಬೇಕೆಂಬುದರ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿಯನ್ನ ಇಲಾಖೆ ನೀಡಲಿದೆ.
ವಿದ್ಯಾಗಮ ಕಾರ್ಯಕ್ರಮ ಶಿಕ್ಷಕರಲ್ಲೂ ವಿದ್ಯಾರ್ಥಿಗಳಲ್ಲೂ ಆತಂಕವನ್ನ ಸೃಷ್ಟಿ ಮಾಡಿತ್ತು. ಇದೇ ಕಾರಣಕ್ಕೆ ಹಲವರು ಕೊರೋನಾಗೆ ಬಲಿಯಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು.