ಧಾರವಾಡದಲ್ಲಿ “ಇನ್ಸಪೆಕ್ಟರ್ ಮಲ್ಲನಗೌಡ ಟೀಂ”ನಿಂದಲೇ ‘ರಹಸ್ಯ ಆಪರೇಷನ್’…
1 min readಧಾರವಾಡ: ಅವಳಿನಗರದ ಪೊಲೀಸರು ಹೊಸ ವರಸೆಯೊಂದನ್ನ ಆರಂಭಿಸಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನಗರದ ಸಂಚಾರಿ ಠಾಣೆ ಇನ್ಸಪೆಕ್ಟರ್ ತಂಡ, ರಹಸ್ಯ ಕಾರ್ಯಾಚರಣೆ ನಡೆಸಿದೆ.
ಧಾರವಾಡದ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಲ್ಲನಗೌಡರ ನಾಯ್ಕರ ಅವರ ಮಾರ್ಗದರ್ಶನದಲ್ಲಿ ಎಎಸ್ಐ ವೀರೇಶ ಬಳ್ಳಾರಿ, ಸಿಬ್ಬಂದಿಗಳಾದ ಶಿವಾನಂದ ಚೆಲವಾದಿ, ಶಂಕರಗೌಡ ಪಾಟೀಲ, ಶಿವಾನಂದ ಸುತಗಟ್ಟಿ, ಮಹಾಂತೇಶ ಹೆಗ್ಗಣ್ಣನವರ, ಬಸವರಾಜ ಉಳ್ಳಿಗೇರಿ, ಎನ್.ಎಲ್.ಮುಕಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಧಾರವಾಡದ ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣವನ್ನ ಆಟೋದವರು ಪಡೆಯುತ್ತಿದ್ದಾರೆಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೊಸ ಪ್ಲಾನ್ ರಚನೆ ಮಾಡಿದ್ರು. ಆ ಪ್ರಕಾರ ಮಾರು ವೇಷದಲ್ಲಿ ಹೋದಾಗಲೂ ಹೆಚ್ಚು ಹಣವನ್ನ ಪಡೆಯಲಾಗಿದೆ. ತಕ್ಷಣವೇ ಆರು ಆಟೋಗಳನ್ನ ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.