ಧಾರವಾಡ: “ರಾಜ್ಯ ಪ್ರಶಸ್ತಿ” ಆಯ್ಕೆಯಲ್ಲಿ ಮತ್ತೆ “ಬಾನಗಡಿ”..!? ಜಿಲ್ಲಾ ಪ್ರಮುಖ, ಡಿಡಿಪಿಐ ಇನ್‌ವಾಲ್ವ್…!?

ಧಾರವಾಡ: ಇದು ಮುಗಿಯದ ಕಥೆ. ಇಲ್ಲಿ ಅಧರ್ಮ ಯಾವ ಮಟ್ಟಕ್ಕೆ ಬೆಳೆಯುತ್ತಿದೆ ಎಂದರೇ, ಯಾವುದಕ್ಕೂ ಕಡಿವಾಣ ಹಾಕುವ ಮನಸ್ಥಿತಿಯಲ್ಲಿ ಯಾವುದು ಉಳಿಯುತ್ತಿಲ್ಲ. ಹಾಗಾಗಿಯೇ, ಶಿಕ್ಷಣ ಇಲಾಖೆಯ ರಾಜ್ಯ ಪ್ರಶಸ್ತಿಯನ್ನ ಹಣಕ್ಕಾಗಿಯೇ ಮಾರಾಟ ಮಾಡುವ ಷಡ್ಯಂತ್ರ ಸ್ವಚ್ಛಂದವಾಗಿ ನಡೆಯುತ್ತಿದೆ.
ಈ ಬಗ್ಗೆ ಕರ್ನಾಟಕವಾಯ್ಸ್. ಕಾಂಗೆ ನಿಖರವಾದ ಮಾಹಿತಿ ಲಭಿಸಿದ್ದು, ರಾಜ್ಯ ಪ್ರಶಸ್ತಿಗೆ ಶಿಕ್ಷಕರ ಅತ್ಯುತ್ತಮ ಕಾರ್ಯ ಪರಿಗಣನೆಗೆ ಬಾರದೇ “ಚಾಸೂಸಿ” ಮಾಡಿ ಹಣವೇ ತಾಂಡವಾಡುತ್ತಿದೆ.
ಈಗಾಗಲೇ ಪ್ರಶಸ್ತಿ ಆಯ್ಕೆಗೆ ಹಲವು ಗೊಂದಲಗಳು ಆರಂಭಗೊಂಡಿವೆ. ಸಿಗಬೇಕಾದವರಿಗೆ ಕೊಡದೇ ದೊಡ್ಡದೊಂದು ಡ್ರಾಮಾ ಕ್ರಿಯೇಟ್ ಮಾಡಲಾಗಿದೆ. ಧಾರವಾಡ ಜಿಲ್ಲಾ ಸಂಘದ ಪ್ರಮುಖರೋರ್ವರು ವ್ಯವಸ್ಥೆ ಪಡೆದುಕೊಂಡು ಕೈಬಿಟ್ಟಿದ್ದಾರೆಂದು ಗೊತ್ತಾಗಿದೆ.
ಪ್ರಶಸ್ತಿ ನಿಮಗೆ ಎಂದು ನಂಬಿಸಿದ್ದವರು ಡಿಡಿಪಿಐ ಅವರಿಗೂ ಹೋಗಿ ಭೇಟಿ ಮಾಡಿಸಿ, ವ್ಯವಸ್ಥೆ ಮಾಡಿಸಿ ಬಂದಿರುವುದು ರಹಸ್ಯವಾಗಿ ಉಳಿದಿಲ್ಲ. ಈ ಬಗ್ಗೆ ಧಾರವಾಡ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಿದೆ.