ರಾಜ್ಯಾಧ್ಯಂತ 150ಕ್ಕೂ ಹೆಚ್ಚು ಶಿಕ್ಷಕರ ಸಾವು: ಸಾವಿನ ದವಡೆಗೆ ನೂಕಿದ ವಿದ್ಯಾಗಮ..!

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸವಿದ್ದಾಗಲೇ ಸರಕಾರ ವಿದ್ಯಾಗಮ ಕಾರ್ಯಕ್ರಮ ಆರಂಭಿಸಿ, ಶಿಕ್ಷಕರ ಸಾವಿಗೆ ಕಾರಣವಾಯಿತಾ ಎಂಬ ಸಂಶಯ ಮೂಡುವಂತೆ ಮಾಡಿದ್ದು, ಅದಕ್ಕೆ ಸಾಕ್ಷಿಯಂಬಂತೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಶಿಕ್ಷಕರು ಕೊರೋನಾದಿಂದ ಸಾವಿಗೀಡಾಗಿರುವುದು ಬೆಳಕಿಗೆ ಬಂದಿದೆ.
ಸರಕಾರ ಶಾಲೆಗಳನ್ನ ಆರಂಭಿಸಬೇಕು ಅಥವಾ ಬೇಡವೋ ಎನ್ನುವ ಜಿಜ್ಞಾಸೆಯಲ್ಲಿರುವಾಗಲೇ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಆ ಪ್ರಕಾರ 57 ಶಿಕ್ಷಕರು ಅಖಂಡ ಬೆಳಗಾವಿ ಜಿಲ್ಲೆಯೊಂದರಲ್ಲೇ ಕೊರೋನಾಗೆ ಬಲಿಯಾಗಿದ್ದಾರೆಂದು ಹೇಳಲಾಗಿದೆ.
ಮೃತಪಟ್ಟ ಜಿಲ್ಲೆ ಮತ್ತು ಸಂಖ್ಯೆಯ ವಿವರ ಇಲ್ಲಿದೆ ನೋಡಿ
ಬೆಳಗಾವಿ: 57
ಬಾಗಲಕೋಟೆ: 23
ರಾಯಚೂರು: 15
ಕೊಪ್ಪಳ: 12
ಬಳ್ಳಾರಿ: 10
ಚಿತ್ರದುರ್ಗ: 10
ಹಾವೇರಿ: 08
ವಿಜಯಪುರ-ದಾವಣಗೆರೆ- ತುಮಕೂರು: 03
ಮಂಡ್ಯ: 02
ಕೋಲಾರ: 01
ಇಷ್ಟೊಂದು ಮಾಹಿತಿ ಲಭಿಸಿದ್ದು, ಶಿಕ್ಷಕರು ಕೂಡಾ ಕೊರೋನಾದಿಂದ ಬಳಲುತ್ತಿರುವುದು ಆತಂಕ್ಕಕೆ ಮನೆ ಮಾಡಿದೆ.