ರಾಜ್ಯದಲ್ಲಿಂದು 8161 ಪಾಸಿಟಿವ್- 6814 ಗುಣಮುಖ- 148ಸೋಂಕಿತರ ಸಾವು
ರಾಜ್ಯದಲ್ಲಿ ಇಂದು ಮತ್ತೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಕಡಿಮೆಯಾಗುತ್ತಿದ್ದ ಸಂಖ್ಯೆ ಇಂದು 8161 ಪಾಸಿಟಿವ್ ಪ್ರಕರಣಗಳು ಬರುವ ಮೂಲಕ ಕೊರೋನಾ ಹಾವಳಿ ಇನ್ನೂ ಕಡಿಮೆಯಾಗಿಲ್ಲ ಎನ್ನುವಂತಾಗಿದೆ.
ಇಂದು ರಾಜ್ಯಾಧ್ಯಂತ 6814 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು 148 ಜನರು ಮೃತಪಟ್ಟಿದ್ದು ಖೇದಕರ ಸಂಗತಿಯಾಗಿದೆ.