ರಾಜ್ಯದಲ್ಲಿಂದು 5851 ಪಾಸಿಟಿವ್: 8061 ಗುಣಮುಖ: 103 ಸೋಂಕಿತರ ಸಾವು
ರಾಜ್ಯದಲ್ಲಿ ಇವತ್ತು ಶುಭಸುದ್ದಿ. ಇಂದು ಕೊರೋನಾ ಪಾಸಿಟಿವ್ ಬಂದವರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಇಂದು ಒಂದೇ ದಿನ 8061 ಸೋಂಕಿತರು ಗುಣಮುಖರಾಗಿದ್ದು, 5851 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಬೆಂಗಳೂರು ಒಂದರಲ್ಲೇ 1918 ಜನರಿಗೆ ಪಾಸಿಟಿವ್ ಬಂದಿದ್ದು, ಬೆಂಗಳೂರಲ್ಲಿ 26 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 130 ಜನರು ಸಾವಿಗೀಡಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ 4810 ಸೋಂಕಿತರ ಕೊರೋನಾಗೆ ಬಲಿಯಾದಂತಾಗಿದೆ.