ರಾಜ್ಯದಲ್ಲಿಂದು 4537 ಪಾಸಿಟಿವ್ ಪ್ರಕರಣಗಳು- ಬೆಂಗಳೂರಲ್ಲೇ 2125 ಕೇಸ್
ಬೆಂಗಳೂರು: ಕೊರೋನಾ ಪಾಸಿಟಿವ್ ಪ್ರಕರಣಗಳು ಬಾರದಂತ ತಡೆಗಟ್ಟಲು ರಾಜ್ಯ ಸರ್ಕಾರ ಏನೇನೋ ಪ್ರಯತ್ನ ನಡೆಸುತ್ತಿದೆಯಾದರೂ ಕೊರೋನಾ ವೈರಸ್ ಹಬ್ಬುವಿಕೆ ಕಡಿಮೆ ಆಗುತ್ತಲೇಯಿಲ್ಲ. ಇಂದು ಕೂಡಾ ರಾಜ್ಯದಲ್ಲಿ ದಾಖಲೆಯ ಪ್ರಕರಣಗಳು ಪತ್ತೆಯಾಗಿವೆ.
ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಪ್ರಕರಣಗಳು ಹೆಚ್ಚಾಗಿದ್ದು, ಒಂದೇ ದಿನ 4537 ಪ್ರಕರಣಗಳು ಪತ್ತೆಯಾಗಿವೆ. ರಾಜಧಾನಿ ಬೆಂಗಳೂರಲ್ಲೇ 2125 ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಗಳ ವಿವರ ಇನ್ನಷ್ಟೇ ಸಮಯದಲ್ಲಿ ಹೊರಬೀಳಬೇಕಿದೆ.