Posts Slider

Karnataka Voice

Latest Kannada News

“ಗಣೇಶ ಹಬ್ಬದ ಸ್ಪೇಷಲ್” ಸೋನು ಸೂದ್ ಮೀರಿಸಿದ ಸ್ಟಾರ್ ನಟ: 70 ಕೋಟಿ ಮನೆಯನ್ನ ಏನು ಮಾಡಿದ ಗೊತ್ತಾ..?

1 min read
Spread the love

ಚೈನೈ: ತನ್ನನ್ನ ಸ್ಟಾರ್ ಮಾಡಿದ ಜನಕ್ಕೆ ಏನಾದರು ಮಾಡಬೇಕು ಅಂತ ಕೆಲ ಸ್ಟಾರ್ ನಟರು ಯೋಚನೆ ಮಾಡುತ್ತಾರೆ. ಆದರೆ, ಇದೂ ಎಲ್ಲರಿಗೂ ಸಾಧ್ಯವಾಗಲ್ಲ. ನಾವು ಹೇಳುವ ಈ ನಟ ಮಾತ್ರ ತನ್ನ 70 ಕೋಟಿ ಬೆಲೆಬಾಳುವ ದೊಡ್ಡ ಮನೆಯನ್ನ ಅನಾಥಾಶ್ರಮದ ಮಕ್ಕಳಿಗೆ ದಾನ ಮಾಡುವುದರ ಮೂಲಕ ಇಡೀ ಚಿತ್ರರಂಗ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಮಾಡಿದ್ದಾರೆ.

ನಟ ಸೂರ್ಯ ಯಾರಿಗೆ ತಾನೇ ಗೊತ್ತಿಲ್ಲ, ತಮಿಳು ಚಿತ್ರರಂಗದ ಖ್ಯಾತ ನಟರಲ್ಲಿ ನಟ ಸೂರ್ಯ ಕೂಡಾ ಒಬ್ಬರು. ಸೂರ್ಯ ಅಭಿನಯ ಮಾಡಿದ ಬಹುತೇಕ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ ಎಂದರೆ ತಪ್ಪಾಗಲ್ಲ. ಇನ್ನು ನಟ ಸೂರ್ಯ ಅವರ ತಂದೆ ಕೂಡ ಒಬ್ಬ ಒಳ್ಳೆಯ ನಟನಾಗಿ ಪ್ರಸಿದ್ಧಿಯನ್ನ ಪಡೆದಿದ್ದಾರೆ.

ನಟ ಸೂರ್ಯರಿಗೆ ಆರಂಭದಲ್ಲಿ ಚಿತ್ರರಂಗಕ್ಕೆ ಬರಲು ಸ್ವಲ್ಪನೂ ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ  ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿದ್ದರು. ಜೀವನದಲ್ಲಿ ತುಂಬಾ ಕಷ್ಟಪಟ್ಟ ನಟ ಸೂರ್ಯ ಚಿತ್ರರಂಗಕ್ಕೆ ಕಾಲಿಟ್ಟ ನಂತರ ಟಾಪ್ ನಟನಾಗಿ ಹೊರಹೊಮ್ಮಿದರು.  ಕೆಲವು ದಿನಗಳ ಹಿಂದೆ ತನ್ನ ಕಾಲಿಗೆ ಬಿದ್ದು ನಮಸ್ಕರಿಸಿದ ಅಭಿಮಾನಿಗಳ ಕಾಲಿಗೆ ಬಿದ್ದು ದಯವಿಟ್ಟು ನನ್ನ ಕಾಲಿಗೆ ನಮಸ್ಕರಿಸಬೇಡಿ ಎಂದು ಕೇಳಿಕೊಂಡಿದ್ದರು. ನಟ ಸೂರ್ಯ ನಟ ಸೂರ್ಯ ಮತ್ತು ಅವರ ತಮ್ಮ ಕಾರ್ತಿ ಮದುವೆಯಾದ ಮೇಲೂ ಕೂಡ ತಮ್ಮ ಪೋಷಕರ ಜೊತೆ ಒಂದೇ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಒಂದೇ ನಗರದಲ್ಲಿ ಇದ್ದು ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡುವುದು ಇವರಿಗೆ ಇಷ್ಟ ಇಲ್ಲದ ಕಾರಣ ಒಂದೇ ಮನೆಯಲ್ಲಿ ತಂದೆ ತಾಯಿಯ ಜೊತೆ ವಾಸ ಮಾಡಲು ನಿರ್ಧಾರ ಮಾಡಿದ್ದಾರೆ.

ನಟ ಸೂರ್ಯ ಚೆನೈನ ಪ್ರತಿಷ್ಠಿತ ಏರಿಯಾದಲ್ಲಿ ತಮ್ಮ ತುಂಬು ಕುಟುಂಬದ ಜೊತೆ ವಾಸವಿದ್ದರು. ಆದರೆ, ಕುಟುಂಬ ಬೆಳೆದಂತೆ ಆ ಮನೆ ಸರಿ ಹೋಗಲ್ಲ ಎಂದು ತಿಳಿದ ನಟ ಸೂರ್ಯ ತಮ್ಮ ಕುಟುಂಬಕ್ಕೆ ಸರಿ ಹೋಗುವ ಹೊಸ ಮನೆ ಖರೀದಿ ಮಾಡಿ ಈಗ ಎಲ್ಲರೂ ಖುಷಿಯಿಂದ ಜೀವನ ಮಾಡುತ್ತಿದ್ದಾರೆ. ಹಳೆಯ ಮನೆಯನ್ನ ಮಾರಾಟ ಮಾಡಲು ಇಷ್ಟಪಡದ ನಟ ಸೂರ್ಯ ಸುಮಾರು 70 ಕೋಟಿ ರೂಪಾಯಿ ಬೆಲೆಬಾಳುವ ಮನೆಯನ್ನ ಅನಾಥ ಮಕ್ಕಳಿಗೆ ಬಿಟ್ಟುಕೊಟ್ಟಿದ್ದಾರೆ.

ಹಣದ ಹಿಂದೆ ಓಡುವ ಜನರ ಮದ್ಯೆ ಮಾನವೀಯ ಮೌಲ್ಯದ ಹಿಂದೆ ಹೋಗುತ್ತಿರುವ ನಟ ಸೂರ್ಯ ನಿರ್ಧಾರವನ್ನ ನಾವು ಮೆಚ್ಚಿಕೊಳ್ಳಲೇಬೇಕು. ಕಷ್ಟ ಎಂದು ಬಂದವರ ಸಹಾಯಕ್ಕೆ ನಿಲ್ಲುವ ನಟ ಸೂರ್ಯ ನೂರಾರು ಅನಾಥ ಮಕ್ಕಳನ್ನ ನೋಡಿಕೊಳ್ಳುತ್ತಿದ್ದಾರೆ. 70 ಕೋಟಿ ಬೆಲೆಬಾಳುವ ಮನೆಯನ್ನ ಅನಾಥ ಮಕ್ಕಳಿಗೆ ಬಿಟ್ಟುಕೊಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ, ಯಾರು ಇಲ್ಲದ ಅನಾಥ ಮಕ್ಕಳಿಗೆ ನಾನಿದ್ದೇನೆ ಎಂದು ಹೇಳುತ್ತಿರುವ ನಟ ಸೂರ್ಯನಿಗೊಂದು ಸೆಲ್ಯೂಟ್ ನಿಮ್ಮಿಂದಲೂ ಕಾಮೆಂಟ್ ಮೂಲಕ ತಿಳಿಸಿ.


Spread the love

Leave a Reply

Your email address will not be published. Required fields are marked *

You may have missed